ಬಾಂದ್ರಾದಲ್ಲಿರುವ ಸುಶಾಂತ್ ಸಿಂಗ್ ಮನೆಗೆ ಸಿಬಿಐ ಅಧಿಕಾರಿಗಳ ಭೇಟಿ
ಪುಣೆ,ಆಗುಸ್ಟ್ 23: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ದ ಅಧಿಕಾರಿಗಳು ಶನಿವಾರ ಕಳೆದ ತಿಂಗಳ 14ರಂದು ಮೃತಪಟ್ಟ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಬಾಂದ್ರಾ ಫ್ಲ್ಯಾಟ್‌ಗೆ ಭೇಟಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳನ್ನೊಳಗೊಂಡ ಸಿಬಿಐ ಮತ್ತು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಎರಡನೇ ದಿನದ ತನಿಖೆ ಇದಾಗಿದೆ. ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮತ್ತು ಎಸ್‌ಐಟಿಯ ವಿವಿಧ ತಂಡಗಳು ಬಹು ಆಯಾಮಗಳಿಂದ ಸಾವು ಕುರಿತ ತನಿಖೆಯನ್ನು ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಎಸ್‌ಐಟಿ ಜೂನ್ 14 ರಂದು ಅವರು ಮೃತಪಟ್ಟಿದ್ದ ಸುಶಾಂತ್ ಸಿಂಗ್ ರಜಪೂತ್ ಅವರ ಬಾಂದ್ರಾ ಫ್ಲ್ಯಾಟ್‌ಗೆ ಭೇಟಿ ನೀಡಿ ಪರಿಶೀಲಿಸಿದೆ. ಕೂಪರ್ ಆಸ್ಪತ್ರೆ ಮತ್ತು ಬಾಂದ್ರಾ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸುಶಾಂತ್ ಸಿಂಗ್ ಫ್ಲಾಟ್ ಗೆ ಭೇಟಿ ನೀಡಿದ್ದು, ಫ್ಲಾಟ್‍ನ ಸಹವರ್ತಿಯಾಗಿದ್ದ ಸಿದ್ಧಾರ್ಥ್ ಪಿಥಾನಿ ಮತ್ತು ಬಾಣಸಿಗ ದಿಪೇಶ್ ಅವರನ್ನೂ ಪ್ರಶ್ನಿಸಲಾಗಿದೆ. ಪ್ರಕರಣವನ್ನು ವಿವಿಧ ತಂಡಗಳು ತನಿಖೆ ನಡೆಸುತ್ತಿದ್ದು. ಜೂನ್ 14 ರಂದು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ಮಾತನಾಡಲು ಫೆಡರಲ್ ತನಿಖಾ ತಂಡವೊಂದು ಬಾಂದ್ರಾ ಪೊಲೀಸ್ ಠಾಣೆಗೆ ಭೇಟಿ ನೀಡಿ ನಂತರ ಸುಶಾಂತ್ ಸಿಂಗ್ ಫ್ಲಾಟ್‍ಗೂ ಭೇಟಿ ನೀಡಿದೆ. ಮತ್ತೊಂದು ತಂಡ ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದ ಕೂಪರ್ ಆಸ್ಪತ್ರೆಗೆ ಭೇಟಿ ನೀಡಿತ್ತು.