ಶಿವಾನಿಗೆ ಸಿ.ಸಿ.ಆರ್.ಟಿ. ಸ್ಕಾಲರ್ಶಿಪ್
ಹುಬ್ಬಳ್ಳಿ 09: ಕಿರಾನಾ ಘರಾಣೆಯ ಪ್ರಬುದ್ಧ ಗಾಯಕಿ ಶುಭಾಂಗಿ ಜಾಧವ ಅವರ ಶಿಷ್ಯೆ ಹಾಗೂ ಶುಭಾಂಗಿ ಅಕ್ಯಾಡೆಮಿ ಆಫು್ ಮ್ಯೂಜಿಕ್ ವಿದ್ಯಾರ್ಥಿನಿ ನವನಗರದ ಕು. ಶಿವಾನಿ ಕವಠೇಕರ ಭಾರತ ಸರ್ಕಾರ ಸಂಸ್ಕೃತಿ ಸಚಿವಾಲಯದ ಪ್ರತಿಷ್ಠಿತ ಸಿ.ಸಿ.ಆರ್.ಟಿ ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾಳೆ. ಹುಬ್ಬಳ್ಳಿ ರಾಜನಗರದ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಶಿವಾನಿ ಕವಠೇಕರ, ಶುಭಾಂಗಿ ಜಾಧವ ಅವರಲ್ಲಿ ಕಳೆದ 8 ವರ್ಷಗಳಿಂದ ಸಂಗೀತಾಧ್ಯಯನ ಮಾಡುತ್ತಿದ್ದಾಳೆ. ಸಿಸಿಆರ್ಟಿಯ ಸಿ.ಟಿ.ಎಸ್. ಸ್ಕೀಮ್ (Cultural Talent Search Scheme) ನ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಗಾಯನ ವಿಭಾಗದಲ್ಲಿ ಆಯ್ಕೆಯಾಗಿರುವ ಶಿವಾನಿಗೆ ಗುರು ಶುಭಾಂಗಿ ಜಾಧವ ಅವರು ಶುಭ ಹಾರೈಸಿದ್ದಾರೆ.