ಎಕ್ಸೆಲ್ ಕಟ್ ಆಗಿ ನೀರಾವರಿ ಕಾಲುವೆಗೆ ಉರಳಿದ ಬಸ್: 13 ಜನ ಪ್ರಯಾಣಿಕರು ಗಾಯ
ರಾಣಿಬೆನ್ನೂರು 20: ವಾಯುವ್ಯ ಕರ್ನಾಕ ಸಾರಿಗೆ ಬಸ್ನ ಎಕ್ಸೆಲ್ ಕಟ್ ಆಗಿ ಯುಟಿಪಿ ನೀರಾವರಿ ಕಾಲುವೆಗೆ ಉರಳಿದ ಪರಿಣಾಮ 13 ಜನ ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಹಾರಗೊಪ್ಪ ಬಳಿ ಸೋಮವಾರ ನಡೆದಿದೆ.
ಬಸ್ನಲ್ಲಿ ಪ್ರಯಾಣಿಸುತ್ತಿದ್ದ13 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಎಲ್ಲರೂ ಪ್ರಾಪಾಯದಿಂದ ಪಾರಾಗಿದ್ದಾರೆ. ಎಲ್ಲ ಗಾಯಾಳುಗಳು ನಗರದ ಸಾರ್ವಜನಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಶಿಕಾರಿಪುರದಿಂದ ರಾಣೇಬೆನ್ನೂರಿಗೆ ಬರುವ ಸಂದರ್ಭದಲ್ಲಿ ತಾಲೂಕಿನ ಹಾರಗೊಪ್ಪ ಬಳಿ ಈ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಹಲಗೇರಿ ಪೊಲೀಸರ ಬೇಟಿ ಪರೀಶೀಲನೆ ನಡೆಸಿದರು.