ಬಸ್ ಡಿಕ್ಕಿ: ಸಾವು
ಬೈಲಹೊಂಗಲ 26: ಸಾರಿಗೆ ಬಸ್ ಮತ್ತು ದ್ವಿಚಕ್ರವಾಹನದ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಆನಿಗೋಳ ಗ್ರಾಮದ ಬಳಿ ಶನಿವಾರ ಸಂಜೆ ಸಂಭವಿಸಿದೆ.
ಮೃತನನ್ನು ಆನಿಗೋಳ ಗ್ರಾಮದ ಸುರೇಶ ರಾಮಲಿಂಗಪ್ಪ ಆನಿಗೋಳ (42) ಎಂದು ಗುರುತಿಸಲಾಗಿದೆ. ಬೈಲಹೊಂಗದಿಂದ ಆನಿಗೋಳ ಗ್ರಾಮಕ್ಕೆ ದ್ವಿ ಚಕ್ರವಾಹನದ ಮೂಲಕ ತೆರಳುತ್ತಿರುವಾಗ ಧಾರವಾಡ ಕಡೆಯಿಂದ ಬರುತ್ತಿದ್ದ ಸಾರಿಗೆ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ಘಟಣೆ ನಡೆದಿದೆ. ಬೈಲಹೊಂಗಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.