ಜೋಡೆತ್ತಿನ ಬಂಡಿ ಓಟ: ಹೊಳಗುಂದಿ ಜೋಡೆತ್ತುಗಳಿಗೆ ಮೊದಲ ಸ್ಥಾನ
ಹೂವಿನಹಡಗಲಿ 21: ಪಟ್ಟಣದಲ್ಲಿ ಊರಮ್ಮ ದೇವಿ ಜಾತ್ರೆ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆ ಹಿಂಭಾಗದ ಹೊಲದಲ್ಲಿ ಸೋಮವಾರ ಜೋಡೆತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.
ನಿರ್ಣಾಯಕರು ಹಸಿರು ನಿಶಾನೆ ತೋರುತ್ತಿದ್ದಂತೆ ಚಕ್ಕಡಿಗೆ ಕಟ್ಟಿದ್ದ ಎತ್ತುಗಳು ಓಡತೊಡಗಿದವು. ಎತ್ತುಗಳನ್ನು ಬಾರುಕೋಲಿನಿಂದ ಹೊಡೆದು ಓಟದ ವೇಗ ಹೆಚ್ಚಿಸುತ್ತಿದ್ದರು. ಈ ವೇಳೆ ಸೇರಿದ್ದ ಅಪಾರ ಜನರು ಸಿಳ್ಳೆ, ಕೇಕೆ ಹಾಕುತ್ತ ಹುರಿದುಂಬಿಸುತ್ತಿದ್ದರು. ಎತ್ತಿನ ಬಂಡಿಗಳ ಪೈಪೋಟಿ ನೆರೆದವರ ಮೈನವಿರೇಳಿಸಿತು.ಹೂವಿನಹಡಗಲಿ, ಕೂಡ್ಲಿಗಿ, ಹರಿಹರ, ದಾವಣಗೆರೆ, ಹಿರೇಹಡಗಲಿ, ತಿಪ್ಪಾಪುರ, ಮುದೇನೂರು ಇತರೆ ಕಡೆಗಳಿಂದ 33 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮೂರು ಸುತ್ತುಗಳಲ್ಲಿ ಸ್ಪರ್ಧೆ ನಡೆಯಿತು. ಮೊದಲ ಸ್ಥಾನ ಪಡೆದ ಹೊಳಗುಂದಿಯ ಹನಸಿ ಸಿದ್ದಲಿಂಗಪ್ಪನವರ ಜೋಡೆತ್ತು ರೂ. 50 ಸಾವಿರ, ದ್ವಿತೀಯ ಸ್ಥಾನ ಗಳಿಸಿದ ಹರಿಹರ ತಾಲೂಕು ಗಂಗನರಸಿಯ ಗೋಣಿಬಸವೇಶ್ವರ ಜೋಡೆತ್ತು ರೂ.30 ಸಾವಿರ, ತೃತೀಯ ಸ್ಥಾನ ಪಡೆದ ಹನಕನಹಳ್ಳಿಯ ಮೈಲಾರಲಿಂಗೇಶ್ವರ ಜೋಡೆತ್ತುಗಳಿಗೆ ರೂ. 20 ಸಾವಿರ ಬಹುಮಾನ ನೀಡಲಾಯಿತು.ಸ್ಪರ್ಧೆಗೆ ಚಾಲನೆ ನೀಡಿದ ಶಾಸಕ ಕೃಷ್ಣನಾಯ್ಕ ಮಾತನಾಡಿ, ದೇವಿ ಜಾತ್ರೆ ಅಂಗವಾಗಿ ರೈತರಿಗೆ ಮನರಂಜನೆ ಒದಗಿಸಲು ಜೋಡೆತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಮುಂದಿನ ದಿನಗಳಲ್ಲಿ ಈ ರೀತಿಯ ಗ್ರಾಮೀಣ ಹೂವಿನಹಡಗಲಿಯಲ್ಲಿ ಊರಮ್ಮ ದೇವಿ ಜಾತ್ರೆ ಪ್ರಯುಕ್ತ ನಡೆದ ಜೋಡೆತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಎತ್ತುಗಳು ರೇಸಿಗಿಳಿದಿರುವುದು ಸ್ಪರ್ಧೆಗಳನ್ನು ವ್ಯವಸ್ಥಿತ ಹಮ್ಮಿಕೊಳ್ಳುತ್ತೇವೆ ಎಂದರು.
ಊರಮ್ಮ ದೇವಿ ಜಾತ್ರಾ ಸಮಿತಿ ಅಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ, ಕಾರ್ಯಾಧ್ಯಕ್ಷ ಎಂ.ನಾಗಭೂಷಣ, ಪ್ರಧಾನ ಕಾರ್ಯದರ್ಶಿ ಯು.ಹನುಮಂತಪ್ಪ, ಮನ್ನೆ ಸತ್ಯನಾರಾಯಣ ರೆಡ್ಡಿ, ಬಸೆಟ್ಟಿ ಪ್ರಕಾಶ್, ಜಿ. ವೇಣುಗೋಪಾಲ ಶೆಟ್ಟಿ, ಆರ್. ಸಮ ಪಕ್ಕೀರ್ಪ, ಈಟಿ ಲಿಂಗರಾಜ, ಸಿರಾಜ್ ಬಾವಿಹಳ್ಳಿ, ಪುನೀತ್, ಬಿ.ಬಿ.ಅಸುಂಡಿ, ಜೆ.ಬಸವರಾಜ, ರಾಘವೇಂದ್ರ ಇದ್ದರು.