ಆರೇಳು ವರ್ಷ ಹಾಳಾಗದಂತೆ ಗುಣಮಟ್ಟದ ರಸ್ತೆ ನಿರ್ಮಿಸಿ
ಗುತ್ತಿಗೆದಾರರಿಗೆ ಶ್ರೀಮಂತ ಪಾಟೀಲ ಸೂಚನೆ: ರಸ್ತೆ ಡಾಂಬರಿಕರಣಕ್ಕೆ ರೂ.152 ಕೋಟಿ ಅನುದಾನ ಬಿಡುಗಡೆ
ಸಂಬರಗಿ 24: ಗಡಿಗ್ರಾಮದಲ್ಲಿ ರಸ್ತೆ ಡಾಂಬರಿಕರಣಕ್ಕೆ ರೂ.152 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಒಳ್ಳೆಯ ಗುಣಮಟ್ಟದ ರಸ್ತೆಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ರಸ್ತೆ ಡಾಂಬರಿಕರಣ ಕನಿಷ್ಟವಾಗಿ 6 ರಿಂದ 7 ವರ್ಷ ರಸ್ತೆ ಸರಿಯಾಗಿರಬೇಕು. ಅದರವಳಗಡೆ ರಸ್ತೆ ತಗ್ಗು-ಗುಂಡಿ ಕಂಡುಬಂದರೆ ನನ್ನ ಗಮನಕ್ಕೆ ತರಬೇಕು. ಅವರಿಗೆ ಬಹುಮಾನ ನೀಡಲಾಗುವುದೆಂದು ಕಾಗವಾಡ ಶಾಸಕರಾದ ಶ್ರೀಮಂತ ಪಾಟೀಲ ಹೇಳದರು.
ಅನಂತೂರ ಹೊರವಲಯದ ಅನಂತಪೂರ ಖಿಳೇಗಾಂವ 450 ಲಕ್ಷ ರೂ. ರಸ್ತೆ ಕಾಮಗಾರಿ ಚಾಲನೆ ನೀಡಿ ಮಾತನಾಡಿ ಅವರು. ರಸ್ತೆ ಕಾಮಗಾರಿಗೆ ಅನುದಾನ ಕೊರತೆಯಿಲ್ಲ, ನನ್ನ ಕ್ಷೇತ್ರದಲ್ಲಿ ತೋಟ ಪಟ್ಟಿ ಸಹ ಎಲ್ಲ ರಸ್ತೆಗಳು ಡಾಂಬರಿಕರಣಮಾಡಿ ರೈತರಿಗೆ ಅನಕೂಲಮಾಡುವ ಗುರಿ ಹೋಂದಿದ್ದೆನೆ. ಅಭಿವೃದ್ದಿಗೆ ಜನರ ಸಹಕಾರ ಅತ್ಯವಶಕವಾಗಿದೆ. ನಾನು ಎಲ್ಲ ಗ್ರಾಮಗಳಿಗೆ ಅಭಿವೃದ್ದಿ ಕಾಮಗಾರಿ ಬರದಿಂದ ಸಾಗುತ್ತಾಯಿದೆ. ಸಮುದಾಯ ಭವನ, ದೇವಸ್ಥಾನ ಕಟ್ಟಡ, ನಾಲಾ ಬಂದರ, ಸೇರದಂದ ಹಲವಾರು ಕಾಮಗಾರಿ ಕೈಗೊಂಡಿದ್ದೆನೆ. ಈ ಭಾಗದ ರೈತರ ಕನಸಾಗಿರುವ ಖಿಳೇಗಾಂವ ಬಸವೇಶ್ವರ ಏತ್ ನೀರಾವವರಿಮಾಡೆ ನೀರು ಹರಿಸುತ್ತೇನೆ ರೈತರ ಇಸ್ವಾಸಕ್ಕೆ ಪಾತ್ರನಾಗುತ್ತೇನೆ. ಗಡಿಭಾಗ ನೀರುಹರಿಸಿ ಹಸಿರು ಕ್ರಾಂತಿ ಮಾಡುತ್ತೇನೆಂದು ವಿಶ್ವಾಸ ವ್ಯಕ್ತ ಪಡಿಸಿದರು.
ಈ ಸಮಯದಲ್ಲಿ ಬಿಜೆಪಿಯ ಯುವ ಮುಖಂಡ ಶಿವಾನಂದ ಗೊಲಭಾವಿ, ಮುಖಂಡರಾದ ಓಂಪ್ರಕಾಶ ಡೋಳ್ಳಿ, ಖಿಳೇಗಾಂವ ಗ್ರಾಮಪಂಚಾಯ ಅಧ್ಯಕ್ಷ ರವಿ ನಾಗಗೋಳ, ರವಿ ಹೊನ್ನಾಗೋಳ, ಮಾಂತೇಶ ಸಾಲಿಮಟ್ಟ, ಶಿವಾನಂದ ಖೋತ, ಶಿವರುದ್ರ ಗುಳ್ಳಪ್ಪನವರ, ಗೌಡಪ್ಪ ಗುಳ್ಳಪ್ಪನವರ, ಸಂಗಪ್ಪ ಮಾಯಾನಟ್ಟಿ, ಬಾಹುಸಾಬ ಪತ್ತಾರ, ಸೇರಿದ ಅನೇಕ ಗಣ್ಯರು ಉಪಸ್ಥಿತರಿದ್ದರು