ಬೂದಿಹಾಳ ಸರಕಾರಿ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ಫಲಿತಾಂಶ ಶೇ.100
ಲೋಕದರ್ಶನ ವರದಿ
ಬೈಲಹೊಂಗಲ 08: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ 2022-23 ನೆಯ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.100 ರಷ್ಟಾಗಿದ್ದು ಸತತ ಮೂರು ಬಾರಿ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ. ಕಾವೇರಿ ಮಹಾಂತೇಶ ಬೋಬಡೆ (604) ಪ್ರಥಮ, ರಾಜೇಶ್ವರಿ ಗಂಗಪ್ಪ ಸೊಗಲದ (595) ದ್ವಿತೀಯ, ಚೈತ್ರಾ ಕುಬೇಂದ್ರ ಸೊಗಲದ (591) ತೃತೀಯ ಸ್ಥಾನ ಪಡೆದಿದ್ದಾರೆ.
ಪರೀಕ್ಷೆಗೆ ಹಾಜರಾದ ಒಟ್ಟು 33 ವಿದ್ಯಾರ್ಥಿಗಳಲ್ಲಿ ಎಲ್ಲ ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದು 9 ಡಿಸ್ಟಿಂಕ್ಷನ್, 20 ಪ್ರಥಮ ಶ್ರೇಣಿ ಪಡೆದಿದ್ದಾರೆ. ಪರೀಕ್ಷಾ ಮಂಡಳಿ ನಿಗಧಿಪಡಿಸಿದ ಗುಣಾತ್ಮಕ ಫಲಿತಾಂಶದಲ್ಲಿ ಶಾಲೆಯು ಶೇ.88.57 ರಷ್ಟು ಪಡೆದು ಎ ಗ್ರೇಡ್ ದಾಖಲಿಸಿದೆ. ಕನ್ನಡ ವಿಷಯದಲ್ಲಿ ಇಬ್ಬರು 125 ಹಿಂದಿ ವಿಷಯದಲ್ಲಿ ಇಬ್ಬರು 100, ಗಣಿತ ವಿಷಯದಲ್ಲಿ ಒಬ್ಬ ವಿದ್ಯಾರ್ಥಿ ನಿ 100 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಹಾಗೂ ಎಲ್ಲ ಸಿಬ್ಬಂದಿ, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಗ್ರಾಮಸ್ಥರು ಅಭಿನಂದಿಸಿದ್ದಾರೆ.