ಬಜೆಟ್ ಸ್ವಾಗತಾರ್ಹ: ಬಣಕಾರ
ರಾಣಿಬೆನ್ನೂರ: 17 ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್. ಸರ್ವಜನಾಂಗವನ್ನು ಗಮನದಲ್ಲಿಟ್ಟುಕೊಂಡಿರುವ ಬಜೆಟ್ ಇದಾಗಿದೆ. ಅವರು ನುಡಿದಂತೆ ನಡೆದಿದ್ದಾರೆ. ಕೃಷಿ .ಶಿಕ್ಷಣ. ರೈತಾಪಿ ವರ್ಗದ ಜೊತೆಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಯನ್ನೇ ಗುರಿಯನ್ನಾಗಿಟ್ಟುಕೊಂಡು ರೂಪಿಸಿದ ಮತ್ತು ಉದ್ಯಮಿಗಳ ವ್ಯಾಪಾರಸ್ಥರ ಏಳಿಗೆಯ ಜೊತೆಗೆ ವಯೋರುದ್ದರ. ಅಂಗವಿಕಲರ. ಮಹಿಳೆಯರ ಅಂಗನವಾಡಿ ಶಿಕ್ಷಕಿಯರ ಪಾಲಿಗೆ ಕಾಮದೇನು ಕಲ್ಪವೃಕ್ಷದಂತೆ ಘೋಷಣೆ ಮಾಡಿದ್ದಾರೆ. ಕೇವಲ ಚುನಾವಣೆಯ ಸಂಧರ್ಭದಲ್ಲಿ ಜನರನ್ನು ಮರಳು ಮಾಡುವ ಡೋಂಗಿ ಬಜೆಟ್ ಇದಾಗದೆ ಸರ್ವ ಜನಾಂಗದವರ ಹಿತ ಕಾಯುವ ಬಜೆಟ್ ಇದಾಗಿದೆ. ಒಟ್ಟಾರೆ ಬಜೆಟ್ ಸ್ವಾಗತಾರ್ಹವಾಗಿದೆ ಎಂದು ಗಂಗಾಧರ ಬಣಕಾರ ತಿಳಿಸಿದ್ದಾರೆ.