ನದಿಹರಳಹಳ್ಳಿ ಹೊಳೆ ಗುಂಡಿಯಲ್ಲಿ ಮುಳುಗಿ ಅಣ್ಣ ತಮ್ಮನ ಸಾವು
ರಾಣೇಬೆನ್ನೂರು 27: ಹೊಳೆಯಲ್ಲಿ ಸ್ನಾನ ಮಾಡಲು ಹೋದ ಅಣ್ಣ ತಮ್ಮರಿಬ್ಬರು, ಅಕ್ರಮ ಮರಳುಗಾರರು ಹೋಳೆಯಲ್ಲಿ ತೋಡಿದ, ಗುಂಡಿಯಲ್ಲಿ ಮುಳಗಿ ದುರಂತ ಸಾವು ಕಂಡ ಘಟನೆ ತಾಲೂಕಿನ ನದಿ ಹರಳಹಳ್ಳಿ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಕಳೆದ 24ರಂದು ಮಧ್ಯಾಹ್ನ ಸಂಭವಿಸಿದೆ.
ದುರಂತ ಘಟನೆಯಲ್ಲಿ ಗ್ರಾಮದ ಬಸವರಾಜ ಮಂಜಪ್ಪ ಪವಾರ್ (12) ಹಾಗೂ ನಾಗರಾಜ ಮಂಜಪ್ಪ ಪವಾರ್ (9) ಎಂದು ಗುರುತಿಸಲಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ, ಗ್ರಾಮದ ನಾಗರಿಕರು ತಂಡೊಪ ತಂಡವಾಗಿ, ಹೋಳೆಯ ಬಳಿ ಸಾಗುತ್ತಿರುವುದು ಸಾಮಾನ್ಯವಾಗಿತ್ತು. ಅಕ್ರಮ ಮರಳು ದಂದೆಕೋರರು, ಈ ಘಟನೆಗೆ ಕಾರಣರಾಗಿದ್ದು, ಪೋಲಿಸ್ ಇಲಾಖೆ ಮತ್ತು ಕಂದಾಯ ಇಲಾಖೆ, ಅವರ ಲೈಸೆನ್ಸ್ ರದ್ದುಪಡಿಸಿ, ಸೋಕ್ತ ನ್ಯಾಯ ಸಿಗುವವರೆಗೂ, ಸ್ಥಳ ಬಿಟ್ಟು ಕದಲುವುದಿಲ್ಲವೆಂದು ಗ್ರಾಮಸ್ಥರು ಬಿಗಿ ಪಟ್ಟು ಸಡಿಲಿಸದೆ ಧರಣಿ ನಡೆಸಿದ್ದರು. ಸ್ಥಳಕ್ಕೆ ಇಲಾಖೆಯ ಅಧಿಕಾರಿಗಳು, ಮತ್ತು ಕಂದಾಯ ಅಧಿಕಾರಿಗಳು ಧಾವಿಸಿ, ಕುಟುಂಬದವರಿಗೆ ಮತ್ತು ಗ್ರಾಮಸ್ಥರ ಮನವರಿಸುವಲ್ಲಿ ಮುಂದಾಗಿದ್ದರು ಆದರೆ ಯಾವುದೇ ಕಾರಣಕ್ಕೂ, ಸ್ಥಳ ಬಿಟ್ಟು ಕದಲುವುದಿಲ್ಲ, ಎಂದು ಧರಣಿ ಆರಂಭಿಸಿದ್ದರು., ನ್ಯಾಯ ಪಂಚಾಯಿತಿ ಮೂಲಕ ಆಂಟಿಮವಾಗಿ ಸೋಮವಾರ ಸಂಜೆ ಅಣ್ಣ ತಮ್ಮಂದಿರಿಬ್ಬರ ಶವ ಸಂಸ್ಕಾರ ನೆರವೇರಿಸಲಾಯಿತು