ಬ್ರಹ್ಮಭೋಜನ ಸಮಾರಂಭ: ಸ್ವಾರ್ಥ ತೊರೆದು ಸಮ ಸಮಾಜ ನಿರ್ಮಾಣ ಮಾಡಬೇಕು
ರಾಣಿಬೆನ್ನೂರ 15: ಜಗತ್ತಿನಲ್ಲಿ ಅತಿಯಾದ ಸ್ವಾರ್ಥ ತುಂಬಿದ್ದು ಪ್ರಕೃತಿಯಲ್ಲಿ ದುರಾಸೆಗೆ ಸ್ಥಾನವಿಲ್ಲ. ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಶ್ರಮಿಸಿದಾಗ ಮಾತ್ರ ಜೀವರಾಶಿಗಳು ಬದುಕುಳಿಯಲು ಸಾಧ್ಯ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಇಲ್ಲಿನ ಗೌರಿಶಂಕರ ನಗರದ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ಏರಿ್ಡಸಿದ್ದ ಬ್ರಹ್ಮ ಭೋಜನ ಸಮಾರಂಭದಲ್ಲಿ ಅವರು ಮಾತನಾಡಿದರು. ಮನುಷ್ಯ ಸ್ವಾರ್ಥ ತೊರೆದು ಭಗವಂತನ ಕೃಪೆಗೆ ಪಾತ್ರರಾಗಬೇಕು. ಮಾನವಿತೆಯಿಂದ ಬಾಳಬೇಕು. ಸಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಬಹು ಮುಖ್ಯ. ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಹೀಗಾದಲ್ಲಿ ಭಾರತ ವಿಶ್ವ ಗುರುವಾಗಲು ಸಾಧ್ಯ ಎಂದರು.
ಸ್ಥಳೀಯ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಮಾಲತಿ ಅಕ್ಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಪ್ರಾಕೃತಿಕ ಅವಘಡ ಹೆಚ್ಚಾಗಿದೆ. ಜೀವನದಲ್ಲಿ ನೈತಿಕತೆ ಅತ್ಯಾವಶ್ಯಕವಾಗಿದೆ ಎಂದರು.
ತುಮ್ಮಿನಕಟ್ಟಿ ಈಶ್ವರಿ ವಿಶ್ವವಿದ್ಯಾಲಯ ಮಧು ಅಕ್ಕ ಮಾತನಾಡಿ, ಮೌಲ್ಯಗಳ ಪಾಲನೆ ಮಾಡುವ ಮೂಲಕ ಜೀವನದಲ್ಲಿ ಸಾಕ್ಷಾತ್ಕಾರ ಹೊಂದಬಹುದು. ಆಧ್ಯಾತ್ಮಿಕ ಮಾರ್ಗ ಪಾಲಿಸುವ ಮನೆಯಲ್ಲಿ ಶಾಂತಿ, ನೆಮ್ಮದಿಯಿರುತ್ತದೆ ಎಂದರು.
ಗಂಗಾಧರ ಬಣಕಾರ, ಅರವಿಂದ ಪಾಟೀಲ, ಕರಬಸಪ್ಪ ಮಾಕನೂರ, ಹೊನ್ನಾಳಿ, ರಮೇಶ ಹಂಚಿನಮನಿ, ಚಂದ್ರ್ಪ ಹೊನ್ನಾಳಿ, ಚಂದ್ರಣ್ಣ ಛತ್ರದ, ಮಹದೇವಪ್ಪ ಬಣಕಾರ ಮತ್ತಿತರರಿದ್ದರು.