ಬಾಲಕರ ಥ್ರೋ ಬಾಲ್: ವಿಭಾಗ ಮಟ್ಟಕ್ಕೆ ಆಯ್ಕೆ
ಹೂವಿನ ಹಡಗಲಿ 04: ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಬನ್ನಿಮಟ್ಟಿ ಬಾಲಕರು ಥ್ರೋಬಾಲ್ನಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಇಂದು ಕೂಡ್ಲಿಗಿಯಲ್ಲಿ ನಡೆದ ಪ್ರಾಥಮಿಕ ಶಾಲೆಯ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಹಗರಿ ಬೊಮ್ಮನಹಳ್ಳಿ ತಂಡದ ವಿರುದ್ಧ ಗೆಲುವು ಸಾಧಿಸಿದ್ದಾರೆ.
ತಾಲೂಕು ದೈಹಿಕ ಅಧೀಕ್ಷಕರಾದ ಮುಸ್ತಫಾ ಎಸ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಪ್ಪ,ಶಾಲಾ ಮುಖ್ಯಗುರು ರಾಮಕೃಷ್ಣ ಗೌಡರ್ ದೈಹಿಕ ಶಿಕ್ಷಕರಾದ ಜಿ ಉಮಾಪತಿ ತಂಡದ ಕೋಚ್ ಬಸವರಾಜ ಸಂಶಿ ಸಹ ಶಿಕ್ಷಕರಾದ ಚಂದ್ರ್ಪ ಎಂ. ಗುಡ್ಡಪ್ಪ ಜಿ, ಜಗನ್ನಾಥಸಾ ಹಬೀಬ, ಬಸವಣ್ಯಮ್ಮ ಎ. , ನಾಗರತ್ನ ಜಿ. ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಾನಂದ ಕೆ. ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೀರಣ್ಣ ಕಾರ್ಯದರ್ಶಿ ಕೋಟೆಪ್ಪ ಊರಿನ ನಾಗರಿಕರು ಮತ್ತು ಶಿಕ್ಷಣ ಪ್ರೇಮಿಗಳು ಶುಭ ಹಾರೈಸಿದ್ದಾರೆ.
ತಂಡದ ನಾಯಕ ತನ್ವೀರ್ ಏರಿಮನಿ ಸಹ ಆಟಗರಾರದ ಮಾರುತಿ ಬಳ್ಳಾರಿ. ಅಫಾನ್ ಎ. ಚನ್ನವೀರೇಶ ಮಾಗಳದ, ಇನುಸ್ ದೇಸಳ್ಳಿ, ಭರತ್, ತಾಜುದ್ದೀನ್, ಪ್ರಜ್ವಲ್, ಜೀವನ್, ಪಂದ್ಯದಲ್ಲಿ ಪಾಲ್ಗೊಂಡಿದ್ದರು.