ಬೂತ್ ವಿಜಯ ಅಭಿಯಾನಕ್ಕೆ ಶ್ರೀನಿವಾಸ ಪಾಟೀಲ ಚಾಲನೆ
ಶೇಡಬಾಳ : ಕಾಗವಾಡ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಬೂತ್ ವಿಜಯ ಅಭಿಯಾನದಡಿ ಶ್ರೀಮಂತ ಪಾಟೀಲ ಶಾಸಕರ ಜನಸಂಪರ್ಕ ಕಾರ್ಯಲಯ ಮತ್ತು ಪಟ್ಟಣದ ಕಾರ್ಯಕರ್ತರ ಮನೆ ಮನೆ ಮೇಲೆ ಬಿಜೆಪಿ ಪಕ್ಷದ ಧ್ವಜಾರೋಹಣ ನೆರವೇರಿಸುವ ಕಾರ್ಯಕ್ರಮಕ್ಕೆ ಪಕ್ಷದ ಪದಾಧಿಕಾರಿಗಳೊಂದಿಗೆ ಯುವಮುಖಂಡ ಶ್ರೀನಿವಾಸ ಶ್ರೀಮಂತ ಪಾಟೀಲ ಚಾಲನೆ ನೀಡಿದರು.
ಗುರುವಾರ ದಿ. 5 ರಂದು ಶಾಸಕರ ಜನಸಂಪರ್ಕದ ಕಾರ್ಯಾಲಯದಲ್ಲಿ ಪಕ್ಷದ ಧ್ವಜರೋಹಣ ನೆರವೇರಿಸುವುದರೊಂದಿಗೆ ಚಾಲನೆ ನೀಡಿದ ಅವರು ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆ ಕುರಿತಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ, ಬೂತ್ ಸಮಿತಿಗಳ ರಚನೆ, ಪೇಜ್ ಪ್ರಮುಖರ ನಿಯುಕ್ತಿ, ಕಾರ್ಯಕರ್ತರ ಮನೆಗಳ ಮೇಲೆ ಧ್ವಜಾರೋಹಣ ನೆರವೇರಿಸಿ ಬಿಜೆಪಿ ಪಕ್ಷದ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಅದರಂತೆ ಶಿರಗುಪ್ಪಿ ಗ್ರಾಮದಲ್ಲಿಯೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಮಯದಲ್ಲಿ ಶ್ರೀನಿವಾಸ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಖೋಕಲೆ, ರಮೇಶ ಖೇತಗೌಡರ, ತಮ್ಮಣ್ಣ ಪಾರಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಶಿವಾನಂದ ನವಿನ್ಯಾಳ, ಜಿಲ್ಲಾ ಕಾರ್ಯದರ್ಶಿ ವಿಮಲಾ ಪಾಟೀಲ, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀದೇವಿ ಚೌಗಲಾ, ದೀಪಕ ಪಾಟೀಲ, ಸಂತೋಷ ಶೇಠ, ಮಹಾದೇವ ಗಣಾಚಾರಿ, ಪ್ರವೀಣ ಕವಟಗೆ, ಪಂಚಾಕ್ಷರಿ ಅಂಗಡಿ, ಅರುಣ ಜೋಶಿ, ಪ್ರಕಾಶ ದೋಂಡಾರೆ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು, ಮತ್ತಿತರರ ಮುಖಂಡರು, ಬೂತ್ ಅಧ್ಯಕ್ಷರು, ಸದಸ್ಯರು, ಶಕ್ತಿ ಕೇಂದ್ರದ ಪ್ರಮುಖರು, ಪೇಜ ಪ್ರಮುಖರು ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಇದ್ದರು.