ಇಂದು ಪುಸ್ತಕ ಬಿಡುಗಡೆ,ಸಾಧಕರಿಗೆ ಸನ್ಮಾನ
ಇಂಡಿ: ಪಟ್ಟಣದ ಚವಡಿಹಾಳ ರಸ್ತೆಯಲ್ಲಿರುವ ಗುರುಬಸವ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಮ್.ಬಿ. ಬಿರಾದಾರ ಇವರ 81 ನೆಯ ಜನ್ಮ ದಿನಾಚರಣೆ ಮತ್ತು 80 ವರ್ಷಗಳ ಸಾಧನಾ ಪಯಣ ಪುಸ್ತಕ ಬಿಡುಗಡೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಶುಕ್ರಮಾರ ಜ.6 ರಂದು ಬೆಳಗ್ಗೆ 11 ಗಂಟೆಗೆ ಮಹಾವಿದ್ಯಾಲಯದ ಸಬಾಭವನದಲ್ಲಿ ನಡೆಯಲಿದೆ.
ಸಾನಿಧ್ಯವನ್ನು ಖೇಡಗಿ ವಿರಕ್ತಿಮಠದ ಶಿವಬಸವರಾಜೇಂದ್ರ ಶ್ರೀಗಳು ವಹಿಸಲಿದ್ದು, ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ, ಸಾಹಿತಿ ಮಲ್ಲಿಕಾರ್ಜುನ ಜೇವರಗಿ, ಅಣ್ಣಾರಾಯ ಬಿರಾದಾರ ಪಾಲ್ಗೊಳ್ಳುವರು ಎಂದು ಸಂಸ್ಥೆಯ ಉಪಾಧ್ಯಕ್ಷ ಅಭಿಮನ್ಯು ಬಿರಾದಾರ ತಿಳಿಸಿದ್ದಾರೆ.