ಡಾ. ಸರಜೂ ಕಾಟ್ಕರ್ ಕಲಿತ ಶಾಲೆಗೆ ಪುಸ್ತಕ ದೇಣಿಗೆ
ಕಾಗವಾಡ 16: ಬೆಳಗಾವಿಯ ಹಿರಿಯ ಪತ್ರಕರ್ತರು ಹಾಗೂ ಉತ್ತಮ ಸಾಹಿತಿ ಡಾ. ಸರಜೂ ಕಾಟ್ಕರ್ ಇವರು ಬರೆದ ಹಾಗೂ ಸಂಗ್ರಹಿಸಿದ ಸಾವಿರಾರು ಪುಸ್ತಕಗಳನ್ನು ತಾವು ಕಲಿತ ಕಾಗವಾಡ ತಾಲೂಕಿನ ಶಿರಗುಪ್ಪಿಯ ಸಿದ್ದೇಶ್ವರ ವಿದ್ಯಾಲಯಕ್ಕೆ ಕೊಡಮಾಡಿದರು. ಶಾಲಾ ಆಡಳಿತ ಮಂಡಳಯವರು ಅವರನ್ನು ಆತ್ಮೀಯವಾಗಿ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು.
ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಸಿದ್ದೇಶ್ವರ ವಿದ್ಯಾಲಯದಲ್ಲಿ ಡಾ. ಸರಜೂ ಕಾಟ್ಕರ್ ಇವರನ್ನು ಸನ್ಮಾನಿಸಲಾಯಿತು.
ಈ ಶಾಲೆಯ ಹಳೆಯ ವಿದ್ಯಾರ್ಥಿಯಾದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು. ಉತ್ತಮ ಅನುವಾದಕರು ಹಾಗೂ ವಾಗ್ಮೀಗಳು ಬೆಳಗಾವಿಯ ಬಿ.ಕೆ. ಕಾಲೇಜನ ನಿವೃತ್ತ ಕನ್ನಡ ಉಪನ್ಯಾಸಕರು ಅಷ್ಟೇ ಅಲ್ಲದೆ ಕರ್ನಾಟಕ ಮತ್ತು ಮಹರಾಷ್ಟ್ರದ ಸಂಸ್ಕೃತಿಕ ಅಧ್ಯಯನಗಳ ತಾತ್ವಿಕತೆ ಎಂಬ ಕೃತಿಗೆ ಡಾಕ್ಟರೇಟ ಪ್ರಶಸ್ತಿಯನ್ನು ಪಡೆದ ಶಿರಗುಪ್ಟಿ ಗ್ರಾಮದ ಮೊದಲಿಗರು. ಗುರಿಗೆ ಪುಸ್ತಕವೇ ಗುರು ಎನ್ನುವ ಭಾವದವರು ಪುಸ್ತಕ ಓದುವ ಹವ್ಯಾಸಿಗರು ಪುಸ್ತಕ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡವರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಆಯ್ ಎ ಪಾಟೀಲ, ಆರ್ ಎನ್ ಪಾಟೀಲ, ಆಯ್ ಎಫ್ ಕನವಾಡೆ, ಅರ್ ಬಿ ಪಾಟೀಲ ಮುಖ್ಯಾಧ್ಯಾಪಕ ಎಸ್ ಡಿ ಬುವಾ ಎಲ್ಲ ಶಿಕ್ಷಕರು ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎ.ಎಸ್. ಪಾಟೀಲ ಕಾರ್ಯಕ್ರಮ ನಿರೂಪಿಸಿದರು.