ಕಾಗವಾಡ

ಬೋನ್ ಕ್ಯಾನ್ಸ್‌ರ್‌: ಸಾದ್ವೀಕ್ ಚಿಕಿತ್ಸೆಗೆ ಮಹಾವೀರ ಪಡನಾಡ ಧನ ಸಹಾಯ

ಬೋನ್ ಕ್ಯಾನ್ಸ್‌ರ್‌: ಸಾದ್ವೀಕ್ ಚಿಕಿತ್ಸೆಗೆ ಮಹಾವೀರ ಪಡನಾಡ ಧನ ಸಹಾಯ

ಲೋಕದರ್ಶನ ವರದಿ 


ಕಾಗವಾಡ 09: ತಾಲೂಕಿನ ಐನಾಪುರ ಪಟ್ಟಣದ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿ ಸಾದ್ವೀಕ್ ಬುರ್ಲಿ. ಈ ವಿದ್ಯಾರ್ಥಿಗೆ ಬೋನ್ ಕ್ಯಾನ್ಸ್‌ರ್ ಇರುವುದು ಪತ್ತೆಯಾಗಿದ್ದು ಸುಮಾರು 50 ಲಕ್ಷ ರೂ ಉಪಚಾರದ ವೆಚ್ಚವಿದೆ ಎಂದು ತಿಳಿದು ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಸಮಾಜಿಕ ಕಾರ್ಯಕರ್ತರು ಹಾಗೂ ಶಿಕ್ಷಣ ಪ್ರೇಮಿ ಮಹಾವೀರ ಪಡನಾಡ ಇವರು ಚಿಕಿತ್ಸೆಗೆ ಸಹಾಯಧನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

 ಶನಿವಾರ ದಿ.8 ರಂದು ಐನಾಪುರದ ಧನ್ವಂತರಿ ಆಸ್ಪತ್ರೆಯಲ್ಲಿ ಸ್ಥಳಿಯ ಖಾಸಗಿ ವೈದ್ಯರು ಹಾಗೂ ಸಾಮಿಜಿಕ ಕಾರ್ಯಕರ್ತ ಡಾ. ಆನಂದ ಮುತಾಲಿಕ ಡಾ.ಶ್ರೀನಿವಾಸ ಕುಲಕರ್ಣಿಯವರ ಮುಖಾಂತರ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೆ ಮಹಾವೀರ ಪಡನಾಡ ಚಿಕಿತ್ಸೆಗಾಗಿ ಸಹಾಯಧನ ನೀಡುವ ಮೂಲಕ ಮಾನವೀಯತೆ ಮೆರೆದರು. 

 ಸಾದ್ವೀಕ್ ಬುರ್ಲಿ ಇತನು ಹುಬ್ಬಳ್ಳಿಯ ವಿದ್ಯಾನೀಕೇತನ ಸಂಸ್ಥೆಯಲ್ಲಿ ಪಿಯುಸಿ ಓದಿ ಅಲ್ಲಿ ರಾ​‍್ಯಂಕ್ ಪಡೆದು ಬೆಳಗಳೂರಿನ ಖ್ಯಾತ ಕಾಲೇಜು ಒಂದರಲ್ಲಿ ಬಿಇ ಓದುತ್ತಿದ್ದಾನೆ. ಇತ್ತೀಚಿಗಷ್ಟೇ ಆತ ಆಯತಪ್ಪಿ  ಬಿದ್ದ ಪರಿಣಾಮವಾಗಿ ಕಾಲಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದನು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಆತನನ್ನು ಹೆಚ್ಚಿನ ತಪಾಸನೆಗೊಳಪಡಿಸಿದಾಗ  ಬೋಣ(ಎಲುವು) ಕ್ಯಾನ್ಸ್‌ರ್ ಇದೆ ಎಂದು ಪತ್ತೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  

ಸಾದ್ವೀಕ್ ಬುರ್ಲಿ ಇವರ ತಂದೆ ವಿದ್ಯಾಧರ ಬುರ್ಲಿ ಇತನು ಕೂಡ ಕಾಯಿಲೆಯಿಂದ ಬಳಲುತ್ತಿದ್ದು ಇತನೂ ಕೂಡ  ಬೆಂಗಳೂರಿಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರ್ಥಿಕವಾಗಿ ತೀರ ಬಡವರಿದ್ದು ವಿಷಯ ತಿಳಿದ ಅದೇಷ್ಟೋ ದಾನಿಗಳು ಸಹಾಯ ಹಸ್ತ ಚಾಚಿದ್ದಾರೆ. ಅದರಂತೆ ನನ್ನ ಗಮನಕ್ಕೆ ಡಾ.ಆನಂದ ಮುತಾಲಿಕ ಅವರು ತಂದಾಗ  ಕೂಡಲೇ ನಾನು ಕೂಡ ಕೈಲಾದಷ್ಟು ಸಹಾಯಧನ ನೀಡಿದ್ದೇನೆ. 50 ಲಕ್ಷ ರೂ ಚಿಕಿತ್ಸಾ ವೆಚ್ಚವಿದೆ.  ಅದಕ್ಕಾಗಿ ದಾನಿಗಳು ಎರಡು ಜೀವಗಳನ್ನು ಉಳಿಸಲು ಮುಂದೆ ಬಂದು ಆರ್ಥಿಕ ಸಹಾಯ ಮಾಡುವಂತೆ ಮಹಾವೀರ ಪಡನಾಡ ಸಾರ್ವಜನಿಕರಲ್ಲಿ ಮನವಿ ಮಾಡಿದರು. 

 ವಿದ್ಯಾಧರ ಬುರ್ಲಿ ಇವರನ್ನು 9481655187 ಈ ನಂಬರನ್ನು ಸಂಪರ್ಕಿಸಲು ಕೋರಲಾಗಿದೆ. ಈ ವೇಳೆ ಡಾ ಆನಂದ ಮುತಾಲಿಕ, ಡಾ, ಶ್ರೀನಿವಾಸ ಕುಲಕರ್ಣಿ, ಗುರುರಾಜ ಮಡಿವಾಳರ, ಅನೀಲ ಶಿರಗಾಂವೆ, ಸಾಗರ ಮೋರೆ, ಮಲ್ಲು ಹವಳಪ್ಪಗೋಳ, ಸುಜಾತಾ ಸಾವಳಿ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ