ಮನರಂಜನೆ

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಕಿರಿಯ ಸಹೋದರ ಕೊರೊನಾ ಸೋಂಕಿನಿಂದ ಸಾವು

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಕಿರಿಯ ಸಹೋದರ ಕೊರೊನಾ ಸೋಂಕಿನಿಂದ ಸಾವು

ಮುಂಬೈ,ಆಗಸ್ಟ್ ೨೧: ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ಅವರ ಕಿರಿಯ ಸಹೋದರ ಅಸ್ಲಾಂ ಖಾನ್ ಕೊರೊನಾ ವೈರಸ್ ಸಂಬಂಧಿತ ಸಮಸ್ಯೆಗಳಿಂದ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಅವರಿಗೆ ೮೮ ವರ್ಷ ವಯಸ್ಸಾಗಿತ್ತು. ಕಳೆದ ವಾರ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಅಸ್ಲಾಂ ಖಾನ್ ಅವರಿಗೆ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸಲಾಗುತ್ತಿತ್ತು. ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗದಿಂದ ಅವರು ಬಳಲುತ್ತಿದ್ದರು. ಕೊರೊನಾ ಸೋಂಕು ದೃಢಪಟ್ಟನಂತರ ಕಳೆದ ಶನಿವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸುದ್ದಿ ಓದಿ