ಕೆಂಪವಾಡ ಅಥಣಿ ಶುಗರ್ಸನ ಬಾಯ್ಲರ್ ಪ್ರದೀಪನ ಪೂಜೆ
ಕಾಗವಾಡ 21: ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ರೈತರು, ಕಾರ್ಖಾನೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕಾರ ನೀಡಬೇಕೆಂದು ಮಾಜಿ ಸಚಿವರು ಹಾಗೂ ಅಥಣಿ ಶುಗರ್ಸನ ಅಧ್ಯಕ್ಷ ಶ್ರೀಮಂತ ಪಾಟೀಲ ತಿಳಿಸಿದ್ದಾರೆ.
ಅವರು, ಸೋಮವಾರ ದಿ. 21ರಂದು ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ ಲಿ. ಕಾರ್ಖಾನೆಯ ಸನ್ 2024-25 ನೇ ಸಾಲಿನ 24ನೇ ಹಂಗಾಮಿನ ಬಾಯ್ಲರ್ಗೆ ಅಗ್ನಿ ಪ್ರದೀಪನ ಸಮಾರಂಭದಲ್ಲಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. ರೈತರು ತಾವು ಬೆಳೆದ ಕಬ್ಬನ್ನು ನಮ್ಮ ಕಾರ್ಖಾನೆಗೆ ಪೂರೈಕೆ ಮಾಡಿ, ಹಂಗಾಮಿನ ಯಶಸ್ವಿಗೆ ಸಹಕಾರ ನೀಡಬೇಕು ಎಂದು ರೈತರಲ್ಲಿ ಮನವಿ ಮಾಡಿಕೊಂಡರು.
ಅಥಣಿ ಶುಗರ್ಸನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಯುವ ನಾಯಕ ಯೋಗೇಶ ಶ್ರೀಮಂತ ಪಾಟೀಲ, ಜನರಲ್ ಮ್ಯಾನೇಜರ್ ಆರ್.ಎ. ಲಟಕೆ, ನಿರ್ದೇಶಕ ಅಬ್ದುಲ್ಬಾರಿ ಮುಲ್ಲಾ, ಮುಖಂಡರಾದ ದಾದಾಗೌಡ ಪಾಟೀಲ, ಮೋಹನ ಮುತಾಲಿಕ, ಮುರಗೆಪ್ಪಾ ಮಗದುಮ್ಮ ಇಂದ್ರಜಿತ ಪಾಟೀಲ, ಸುನೀಲ ಪಾಟೀಲ, ಬಾಳು ಮಗದುಮ್ಮ, ದೀಲೀಪ ಪವಾರ, ರಾಜು ಚವ್ಹಾಣ, ಚಂದ್ರಕಾಂತ ಪಾಟೀಲ, ಸಂಭಾಜಿ ಸಾವಂತ ಸೇರಿದಂತೆ ಮತ್ತಿತರ ಮುಖಂಡರು, ಕಾರ್ಖಾನೆಯ ಎಲ್ಲ ವಿಭಾಗಗಳ ಮ್ಯಾನೇಜರ್ಗಳು, ಅಧಿಕಾರಿಗಳು, ಇಂಜಿನಿಯರ್ಗಳು ಹಾಗೂ ಕಾರ್ಮಿಕ ಬಂಧುಗಳು ಉಪಸ್ಥಿತರಿದ್ದರು.