ರಾಣೆಬೆನ್ನೂರ

ತುಂಗಭದ್ರಾ ನದಿಯಲ್ಲಿ ತೇಲಿ ಹೋದ ಯುವಕನ ಶವ: 11 ದಿನಗಳ ನಂತರ ಪತ್ತೆ

ತುಂಗಭದ್ರಾ ನದಿಯಲ್ಲಿ ತೇಲಿ ಹೋದ ಯುವಕನ ಶವ: 11 ದಿನಗಳ ನಂತರ ಪತ್ತೆ

ಲೋಕದರ್ಶನ ವರದಿ

ರಾಣಿಬೆನ್ನೂರು 05:  ತುಂಗಭದ್ರಾ ನದಿಯಲ್ಲಿ ತೇಲಿ ಹೋದ ಯುವಕನ ಶವ ಗುರುವಾರ ತಾಲೂಕಿನ ಮಾಕನೂರ ಗ್ರಾಮದ ಬಳಿ ನದಿ ತಟದ ಬೋಚಿ ಪೆಳೆಯಲ್ಲಿ 11 ದಿನಗಳ ನಂತರ ಪತ್ತೆಯಾಗಿದೆ. 

    ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋದ ಮಂಜುನಾಥ ಬಸವರಾಜ ಆನಂದಿ ಕಾಲು ಜಾರಿ ಬಿದ್ದು ನೀರಿನಲ್ಲಿ ತೇಲಿ ಹೋದ ಘಟನೆ ತಾಲೂಕಿನ ಮಾಕನೂರು ಗ್ರಾಮದ ಬಳಿ ಜು. 23 ರಂದು ತುಂಗಭದ್ರಾ ನದಿಯಲ್ಲಿ ನಡೆದಿತ್ತು. 

    ನೀರಿನ ಒಳ ಹರಿವು ಕಡಿಮೆಯಾದ ಕಾರಣ ಗುರುವಾರ ನದಿಗೆ ಮೀನು ಹಿಡಿಯಲು ಹೋದ ಬೇಟೆಗಾರನಿಗೆ ಶವ ಕಂಡಿದೆ. ಈತನು ಕುಟುಂಬದವರಿಗೆ ತಿಳಿಸಿದಾಗ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವ ಹೊರತಗೆದು ಕುಟುಂಬದವರಿಗೆ ಹಸ್ತಾಂತರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಮಾರಪಟ್ಟಣ ಪೊಲೀರು ಈಜು ಪರಿಣಿತರಿಂದ ಶವ ಪತ್ತೆಗಾಗಿ ಶೋಧನಾ ಕಾರ್ಯ ನಡೆಸಿ ಶವ ಸಿಗದ ಕಾರಣ ಕೈಚೆಲ್ಲಿದ್ದರು 

ಸುದ್ದಿ ಓದಿ