ಹೂವಿನ ಹಡಗಲಿ

ತುಂಗಭದ್ರಾನದಿಯಲ್ಲಿ ಶವ ಪತ್ತೆ: ಕೊಲೆ ಶಂಕೆ

ತುಂಗಭದ್ರಾನದಿಯಲ್ಲಿ ಶವ ಪತ್ತೆ: ಕೊಲೆ ಶಂಕೆ

ಹೂವಿನಹಡಗಲಿ 19 : ತಾಲ್ಲೂಕಿನ ಅಂಕ್ಷಿ ಗ್ರಾಮದ ತುಂಗಭದ್ರಾ ನದಿ ದಡದಲ್ಲಿ ಕೈ, ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿದ ಸ್ಥಿತಿಯಲ್ಲಿರುವ ಪುರುಷನ ಶವ ಬುಧವಾರ ಪತ್ತೆಯಾಗಿದ್ದು, ವ್ಯಕ್ತಿಯ ಕೊಲೆ ಶಂಕೆ ವ್ಯಕ್ತವಾಗಿದೆ. ನದಿಯಲ್ಲಿ ಶವ ತೇಲುತ್ತಿರುವು ದನ್ನು ಗ್ರಾಮಸ್ಥರು ಗಮನಿಸಿಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  

ಪೊಲೀಸರು ಮೀನುಗಾರರ ನೆರವಿನಿಂದ ಶವವನ್ನು ಹೊರಗೆ ತೆಗೆಯಿಸಿ ಪರೀಶೀಲಿಸಿದ್ದಾರೆ. ಮುಖ, ಕೈ ಕಾಲುಗಳು ಉಬ್ಬಿಕೊಂಡಿರುವುದರಿಂದ ಶವದ ಗುರುತು ಪತ್ತೆಯಾಗಿಲ್ಲ. ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಸಿಪಿಐ ದೀಪಕ್ ಬೂಸರೆಡ್ಡಿ, ಪಿಎಸ್‌ಐ ವಿಜಯಕೃಷ್ಣ ಭೇಟಿ ನೀಡಿದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ