ರಕ್ತವು ಕೃತಕವಾಗಿ ತಯಾರಿಸಲಾಗದ ಅಮೂಲ್ಯವಾದ ಸಂಪನ್ಮೂಲ: ಡಾ. ಅಜಿತ ಪ್ರಸಾದ
ಧಾರವಾಡ 12: ರಕ್ತದಾನ ಮಾಡುವುದು ಜೀವದಾನ ಮಾಡಿದಂತೆ, ಒಂದು ಜೀವವನ್ನು ಉಳಿಸುವುದು, ಸಮಾಜವನ್ನು ಆರೋಗ್ಯವಾಗಿಡುವಲ್ಲಿ ರಕ್ತದಾನವು ಪ್ರಾಮುಖ್ಯತೆ ವ"ಸುತ್ತದೆ ಎಂದು ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಹೇಳಿದರು.
ಅವರು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆ.ಎಸ್.ಎಸ್ ಬನಶಂಕರಿ ಪದ" ಕಾಲೇಜು, ಎಸ್.ಡಿ.ಎಂ ರಕ್ತಭಂಡಾರ, ರಾಷ್ಟ್ರೋತ್ಥಾನ ಪರಿಷತ್, ಬೆಂಗಳೂರು ಮತ್ತು ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ರಕ್ತಭಂಡಾರಗಳ ಸಹಯೋಗದಲ್ಲಿ ಆಯೋಜಿಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನ ಮಾಡುವುದು ಒಂದು ಪುಣ್ಯದ ಕೆಲಸ. ಅಪಘಾತಗಳಲ್ಲಿ ಹಾಗೂ ಶಸ್ತ್ರಚಿಕಿತ್ಸೆಯ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಆದರೆ, ಜನರಿಗೆ ರಕ್ತದಾನದ ಬಗ್ಗೆ ಸರಿಯಾದ ಮಾ"ತಿ ಇಲ್ಲದಿರುವದರಿಂದ ರಕ್ತವನ್ನು ನೀಡಲು "ಂಜರಿಯುತ್ತಾರೆ. ರಕ್ತವು ಕೃತಕವಾಗಿ ತಯಾರಿಸಲು ಸಾಧ್ಯವಾಗದ ಅಮೂಲ್ಯವಾದ ಸಂಪನ್ಮೂಲ, ಇಂತಹ ಸಮಾಜಮುಖಿ ಕಾರ್ಯಗಳಿಗೆ ಯುವಜನತೆ ಮುಂದಾಗಿ ರಕ್ತದಾನದ ಮಹತ್ವವನ್ನು ಜನರಿಗೆ ತಿಳಿಹೇಳಿ ರಕ್ತದಾನಕ್ಕೆ ಪ್ರೇರೆಪಿಸುವ ಕೆಲಸವಾಗಬೇಕು ಹೇಳಿದರು.
ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯ ಡಾ. ಉಮೇಶ ಹಳ್ಳಿಕೇರಿಯವರು ಮಾತನಾಡಿ ಯಾವುದೇ ವ್ಯಕ್ತಿಯ ವ್ಯಕ್ತಿಯ ತೂಕ ಹಾಗೂ ಆರೋಗ್ಯ ಸರಿಯಾದ ಕ್ರಮದಲ್ಲಿದ್ದರೇ ಮಾತ್ರ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನಕ್ಕೆ ಒಬ್ಬ ಸಾಮಾನ್ಯ ವಯಸ್ಕನ ದೇಹದಲ್ಲಿ ಐದರಿಂದ ಆರು ಲೀಟರ್ ರಕ್ತ"ದ್ದು, ಅದರಲ್ಲಿ ಕೇವಲ 300 "ುಲಿ ಮಾತ್ರ ರಕ್ತದಾನದ ಸಮಯದಲ್ಲಿ ಬಳಕೆಯಾಗುತ್ತದೆ. ಈ ರಕ್ತವನ್ನು ನಿಮ್ಮ ದೇಹವು 24 ರಿಂದ 48 ಗಂಟೆಗಳ ಒಳಗೆ ಬದಲಾುಸುತ್ತದೆ. ರಕ್ತದಾನದ ನಂತರ ಯಾವುದೇ "ಶೇ? ಆಹಾರ, "ಶ್ರಾಂತಿ ಅಥವಾ ಓ?ಧಿ ಅಗತ್ಯ"ಲ್ಲ. ಇದು ದೇಹದಲ್ಲಿನ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವದಲ್ಲದೇ, ಹೃದಯ ಸಂಬಂಧಿ ಕಾುಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. ಒಳ್ಳೆಯ ಆರೋಗಯಕ್ಕಾಗಿ ಯುವಕರು ಜಂಕ್ ಪುಡ್ನ್ನು ತ್ಯಜಿಸಬೇಕು. ವ್ಯಸನಗಳಿಂದ ದೂರ"ರಬೇಕು ಎಂದು ಹೇಳಿದರು.
ಕಿಮ್ಸ್ ನ ನಿವೃತ್ತ ಸರ್ಜನ್ ಡಾ. ಸಿದ್ಧೇಶ್ವರ ಕಡಕೋಳ ಮಾತನಾಡಿ ರಕ್ತದಾನದಂತೆ ಅಂಗಾಂಗ ದಾನವು ಕೂಡ ಅಷ್ಟೆ ಪ್ರಾಮುಖ್ಯತೆ ವ"ಸುತ್ತದೆ. ವ್ಯಕ್ತಿ ತನ್ನ ಜೀ"ತಾವಧಿಯಲ್ಲೆ ತನ್ನ ಅಂಗಾಂಗಗಳನ್ನು ದಾನ ಮಾಡುವದರಿಂದ ಅಂಗಾಂಗ ವೈಫಲ್ಯತೆುಂದ ಬಳಲುತ್ತಿರುವವರಿಗೆ, ಅಪಘಾತಗಳಲ್ಲಿ ದೈ"ಕ "ಕಲತೆ ಹೊಂದಿದವರಿಗೆ ಮರು ಜೋಡಣೆ ಮಾಡಿ ಮತ್ತೇ ಹೊಸ ಜೀವಕಳೆಯನ್ನು ನೀಡಬಹುದು ಹಾಗೂ ದಾನಿಯ ಜನ್ಮವೂ ಸಾರ್ಥಕತೆುಂದ ತುಂಬಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕು. ಸಿಂಚನಾ ಪ್ರಾರ್ಥಿಸಿದರು, ಡಾ. ಶಿಲ್ಪಾ ದಾನಪ್ಪಗೌಡರ ಸ್ವಾಗತಿಸಿದರು. ಕು. ಭವಾನಿ ಜೋಶಿ ನಿರೂಪಿಸಿದರು. ಭಲಭೀಮ ಹಾವನೂರ ವಂದಿಸಿದರು. ಡಾ. ಲಕ್ಷ್ಮೀದೇ" ಕೆ.ಬಿ, ದತ್ತಮೂರ್ತಿ ಕುಲಕರ್ಣಿ, ಡಾ. ಕೆ. ನಾಗಚಂದ್ರ, ಡಾ. ಸೂರಜ್ ಜೈನ್, ಮಹಾ"ರ ಉಪಾದ್ಯೆ, ಮಂಜುನಾಥ ಜಿ.ಪಿ, ಉಪಸ್ಥಿತರಿದ್ದರು.
ಇಂದು ಜರುಗಿದ ರಕ್ತದಾನ ಶಿಬಿರದಲ್ಲಿ 295 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.