ಅಂಧತ್ವ ಮುಕ್ತ ಅಭಿಯಾನ: ಉಚಿತ ನೇತ್ರ ತಪಾಸಣಾ ಶಿಬಿರ
ಸಿರುಗುಪ್ಪ -ನೇತ್ರ ದಾನದಿಂದ ಇನ್ನೊಬ್ಬರ ಕತ್ತಲ ಬದುಕನ್ನು ಕಣ್ಣಿನ ದಾನಕ್ಕೆ ಎಲ್ಲರೂ ಮುಂದಾಗಬೇಕು ಎಂದು ಕುರವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಎಂ ವಿದ್ಯಾಶ್ರೀ ಹೇಳಿದರು ತಾಲ್ಲೂಕಿನ ಕೆಂಚನಗುಡ್ಡ ತಾಂಡಾ ದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಹಾಗೂ ಅಂಧತ್ವ ಮುಕ್ತ ಬಳ್ಳಾರಿ ಅಭಿಯಾನದಡಿ ಶುಕ್ರವಾರ ಆಯೋಜಿಸಿದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿ ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ಲಭಿಸಬೇಕೆಂಬ ಉದ್ದೇಶದಿಂದ ಗ್ರಾಮ ಮಟ್ಟದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆರೋಗ್ಯ ಜಾಗೃತಿ ಶಿಬಿರ ಹಾಗೂ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಸಲಾಗುತ್ತಿದೆ ಎಂದರು .ಕಣ್ಣಿನ ಪೊರೆ 22ಹಾಗು60 ಜನರಿಗೆ ಕನ್ನಡಕ ಉಚಿತವಾಗಿ ವಿತರಿಸಲಾಯಿತು ಶಿಬಿರದಲ್ಲಿ ವೈದ್ಯಕೀಯ ಸಿಬ್ಬಂದಿಯಾದ ಸಂಧ್ಯಾರಾಣಿ ರತ್ನಮ್ಮ ಆರ್ ಆಶಾ ಕಾರ್ಯ ಕರ್ತರಾದ ಶಂಕ್ರಮ್ಮ ಪ್ರಮೀಳಾ ಮುತ್ತಮ್ಮ ಮುಖಂಡರಾದ ಸ್ವಾಮಿ ನಾಯಕ್ ದೇವಿ ಬಾಯಿ ಸೀತಾಬಾಯಿ ಇದ್ದರು.ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಸಾಕ್ಷರತಾ ಸಮಿತಿಯ ಸದಸ್ಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ತಿಳಿಸಿದರು .