ಹೂವಿನ ಹಡಗಲಿ

ಬಿಸಿಯೂಟ ಬ್ಯಾಂಕ್ ಖಾತೆ ನಿರ್ವಹಣೆಗೆ ಮನವಿ

ಬಿಸಿಯೂಟ ಬ್ಯಾಂಕ್ ಖಾತೆ ನಿರ್ವಹಣೆಗೆ ಮನವಿ

ಹೂವಿನ ಹಡಗಲಿ 18: ಸರ್ಕಾರಿ ಪ್ರೌಢಶಾಲೆಗಳಲ್ಲಿ ಅಕ್ಷರ ದಾಸೋಹ ಪಿ ಎಂ ಪೋಷಣ್ ಯೋಜನೆ ಅನುದಾನದ ಬ್ಯಾಂಕ್ ಖಾತೆಯನ್ನು ಈ ಹಿಂದಿನಂತೆಯೇ ಮುಖ್ಯ ಗುರುಗಳು ಹಾಗೂ ಮುಖ್ಯ ಅಡುಗೆದಾರರು ನಿರ್ವಹಿಸಲು ಮರು ಆದೇಶ ಹೊರಡಿಸಲು ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಹಾಗೂ ಸಹ ಶಿಕ್ಷಕರ ಸಂಘದ ವತಿಯಿಂದ ಇಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ  ಬುಧವಾರ ಮನವಿ ಸಲ್ಲಿಸಿದರು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಕಚೇರಿಗೆ ತೆರಳಿ ಮನವಿ ಪತ್ರ ನೀಡಿದರು.ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳು ಸಂಘದ ಅಧ್ಯಕ್ಷ ಪಿ ಪ್ರಕಾಶ್, ಕಾರ್ಯದರ್ಶಿ ಸುರೇಶ ಅಂಗಡಿ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಲಿಂಗಪ್ಪ, ರಾಜ್ಯ ಸಹ ಕಾರ್ಯದರ್ಶಿ ಶಿವಕುಮಾರ್ ಗಡ್ಡಿ, ಕೋಶಾಧ್ಯಕ್ಷ ಬಸಪ್ಪ ಕೆ., ಮುಖ್ಯ ಗುರುಗಳಾದ ಸಣ್ಣಲಕ್ಕಪ್ಪ, ಕಾಂತೇಶ್, ಎಂ ಪರಶುರಾಮ, ಸೂರ್ಯಕಾಂತ್, ಬಿ ಹಾಲೇಶ್ , ವೆಂಕಟೇಶ್, ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಸುರೇಶ ಲಂಬಾಣಿ, ನಿರಂಜನ ಮೂರ್ತಿ, ಶಿವಯೋಗಿ ಯು ಎಂ, ಗುರುಬಸವರಾಜ ಕಡ್ಲಿ ಇತರರು ಇದ್ದರು. 


ಸುದ್ದಿ ಓದಿ