ದಿವಾನ್ ಸರ್ ಮಿರ್ಜಾ ಮೊಹಮ್ಮದ್ ಇಸ್ಮಾಯಿಲ್ ಅವರ ಜನ್ಮದಿನ
ಸಿರುಗುಪ್ಪ 27:ಕನ್ನಡ ಸಾಹಿತ್ಯ ಪರಿಷತ್ತು ಬೆಳೆವಣಿಗೆಯಲ್ಲಿ ಮೈಸೂರು ಸಂಸ್ಥಾನದ ದಿವಾನ್ ಕನ್ನಡ ಕಾರಣಿಕರ್ತ ಸರ್ ಮಿರ್ಜಾ ಮೊಹಮ್ಮದ್ ಇಸ್ಮಾಯಿಲ್ ಕನ್ನಡನಾಡಿನ ಅವಿಸ್ಮರಣೀಯ ಸೇವೆ ಕೊಡುಗೆ ಅಪಾರ ಎಂದು ಮೈಸೂರು ಹುಲಿ ಟಿಪ್ಪುಸುಲ್ತಾನ್ ರಾಜ್ಯ ಪ್ರಶಸ್ತಿ ಪುರಸ್ಕೃತರು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಜಾಗೃತಿ ಸಮಿತಿ ಕನ್ನಡ ಕಾವಲು ಸಮಿತಿ ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸಮಿತಿ ಸದಸ್ಯರು ಜನಾಭಿಪ್ರಾಯ ಮುಖಂಡರಾದ ಅಲ್ಹಾಜ್ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಅವರು ಅಭಿಪ್ರಾಯಪಟ್ಟರು.
ನಗರದ ಇಬ್ರಾಹಿಂ ಮಂಜಿಲ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಾರಣಿ ಕರ್ತ ಮೈಸೂರು ಸಂಸ್ಥಾನದ ದಿವಾನ್ ಸರ್ ಮಿರ್ಜಾ ಮೊಹಮ್ಮದ್ ಇಸ್ಮಾಯಿಲ್ ಅವರ 137ನೇ ಜನ್ಮದಿನವನ್ನು ನೆನಪಿಸಿ ಸ್ಮರಿಸಿ ಗೌರವಿಸಿ ಮಾತನಾಡುತ್ತಾ ಸರ್ ಮಿರ್ಜಾ ಮೊಹಮ್ಮದ್ ಇಸ್ಮಾಯಿಲ್ ಅವರು ದೇಶ ಮತ್ತು ರಾಜ್ಯಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ನಿಸ್ವಾರ್ಥದಿಂದ ತಮ್ಮ ಕರ್ತವ್ಯ ನಿರ್ವಹಿಸಿದ ಅವರು ಕನ್ನಡ ಕಟ್ಟುವ ಮನಸ್ಸುಗಳನ್ನು ಸೃಷ್ಟಿ ಮಾಡಲು ಕಾರಣ ಕರ್ತರಾಗಿದ್ದರು ಮೈಸೂರು ಸಂಸ್ಥಾನದ ಒಡೆಯರ್ ಅರಸರು ನಮ್ಮ ಕನ್ನಡ ನಾಡಿನ ತುಂಬ ಪ್ರಸಿದ್ಧಿ ಹೊಂದ ಬೇಕಾದರೆ ಸರ್ ಎಂ ವಿಶ್ವೇಶ್ವರಯ್ಯ ದಿವಾನ್ ಪೂರ್ಣಯ್ಯ ದಿವಾನ್ ಸರ್ ಮಿರ್ಜಾ ಮಹಮ್ಮದ್ ಇಸ್ಮಾಯಿಲ್ ಮೈಸೂರು ಸಂಸ್ಥಾನದ ದಿವಾನರಾಗಿ ಕರ್ತವ್ಯ ನಿರ್ವಹಿಸಿ ಪ್ರಜೆಗಳಿಗೆ ಜನಪರ ವಾದಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಿ ಒಡೆಯರ ಮತ್ತು ಪ್ರಜೆಗಳ ಪ್ರೀತಿ ಗಳಿಸಿದ್ದರು. ತಮ್ಮ ಅಧಿಕಾರ ಅವಧಿಯಲ್ಲಿ ಕೃಷಿಗಾಗಿ ನೀರಾವರಿ ಕೆಆರ್ ಎಸ್ ಡ್ಯಾಮ್ ಬೃಂದಾವನ ನಿರ್ಮಾಣ ಅವರ ಶ್ರಮ ಮತ್ತು ಅನೇಕ ಯೋಜನೆಗಳನ್ನು ಅನುಷ್ಠಾನ ಗೊಳಿಸಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದರು. ಸಾಮಾಜಿಕ ಆರ್ಥಿಕ ಜನ ಸಾಮಾನ್ಯರಿಗೆ ಶೈಕ್ಷಣಿಕ ಸೌಲಭ್ಯಗಳು ಕೈಗಾರಿಕಾ ಕೇಂದ್ರಗಳು ದೊಡ್ಡ ಮತ್ತು ಗೃಹ ಕೈಗಾರಿಕೆ ಗಳಿಗೆ ಹೆಚ್ಚಿನ ಸೌಕರ್ಯ ನೀಡಿ ಸಂಸ್ಥಾನದ ನಾಗರಿಕರ ಆರ್ಥಿಕ ಸಬಲೀಕರಣಕ್ಕೆ ದಿಟ್ಟ ಕ್ರಮ ಕೈಗೊಂಡರು. ಕನ್ನಡ ನೆಲ ಜಲ ಭಾಷೆ ನಾಡು ನುಡಿಗೆ ಅವರ ಕೊಡುಗೆ ಸಾಂಸ್ಕೃತಿಕವಾಗಿ ಮೈಸೂರು ಭಾಗಕ್ಕೂ ಅಲ್ಲದೆ ಬಯಲುನಾಡಿಗೆ ಅವರ ಚಟುವಟಿಕೆ ವಿಸ್ತರಿಸಿದರು ನಿವೃತ್ತರಾದ ನಂತರ ವಿವಿಧ ಹುದ್ದೆ ಯಲ್ಲಿ ಹೈದರಾಬಾದ್ ರಾಜಸ್ಥಾನದ ಜೈಪುರ್ ನಲ್ಲಿ ಕೆಲಸ ಮಾಡಿದ್ದಾರೆ ಅದನ್ನು ಬೋಧಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ ಮಾಡಬೇಕಾಗಿದೆ ಎಂದು ಅಬ್ದುಲ್ ನಬಿ ತಿಳಿಸಿದರು.ಸಾಮಾಜಿಕ ಕಾರ್ಯಕರ್ತರು ಕನ್ನಡಿಗರು ಕನ್ನಡಾಭಿಮಾನಿಗಳು ಕನ್ನಡ ಜನಪರ ಹಿತ ಚಿಂತಕರು ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಅವರು ಮಾತನಾಡಿ ಸರ್ ಮಿರ್ಜಾ ಮೊಹಮ್ಮದ್ ಇಸ್ಮಾಯಿಲ್ ಅವರ ಚರಿತ್ರೆ ಸಾಧನೆ ಕನ್ನಡ ಸಾಹಿತ್ಯ ಪರಿಷತ್ ಗೆ ನೀಡಿದ ಕೊಡುಗೆಗಳಲ್ಲಿ ಪ್ರಮುಖ ವ್ಯಕ್ತಿಗಳಲ್ಲಿ ಇವರು ಒಬ್ಬರಾಗಿದ್ದಾರೆ ಕನ್ನಡ ಸಾಹಿತ್ಯ ಪರಿಷತ್ತು ಭಾಷೆ ನೆಲ ಜಲಕ್ಕಾಗಿ ಶ್ರಮಿಸುತ್ತಿದೆ ಮಹನೀಯರ ಚಿಂತನೆಗಳನ್ನು ಪ್ರತಿಯೊಬ್ಬರು ತಿಳಿದು ಕೊಳ್ಳ ಬೇಕಿದೆ ಮುಂದಿನ ಪೀಳಿಗೆಗೆ ವಿಚಾರ ಧಾರೆಗಳನ್ನು ತಿಳಿಸಿ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಿದೆ ಎಂದರು. ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ, ಖತೀಬ್ ಜಹಿರುದ್ದೀನ್ ಬಾಬು, ಹಾಜಿ ಹಂಡಿ ಹುಸೇನ್ ಬಾಷಾ, ಹಾಜಿ ಮೊಹಮ್ಮದ್ ಇಬ್ರಾಹಿಂ, ಮಹಮ್ಮದ್ ರಫೀಕ್, ಮೊಹಮ್ಮದ್ ನೌಶಾದ್ ಅಲಿ, ಬಿ ಕೆ ಅಲ್ಲಾಭಕ್ಷಿ ಡಾ ಮೊಹಮ್ಮದ್ ಅಲಿ, ಡಬಲ್ ಬಾಂಡ್ ಹಾಜಿ ಟಿ ಜಿ ಅಬ್ದುಲ್ ಗನಿ, ಹಾಜಿ ಅಬ್ದುಲ್ ಹಮೀದ್ ಫಾರೂಕಿ, ಹಾಜಿ ಖಾಲಿ ಚೀಲ ಹುಸೇನ್ ಸಾಬ್, ಹಂಡಿ ಹಾಶಿಮ್, ಸಾಕ್ಷರತಾ ಕ್ಷೇತ್ರ ಗೌರವ ಸಂಯೋಜಕ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಜೆ ನಾಗೇಂದ್ರ ಗೌಡ, ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಮೊಹಮ್ಮದ್ ಅಲಿ ಬಾಗವಾನ್ ಅವರು ಹೇಳಿದರು .