ರೈತರಿಗೆ ಅನ್ಯಾಯ ಸರಿಪಡಿಸುವಂತೆ ಬಿರಾದಾರ ಆಗ್ರಹ
ಇಂಡಿ: ಇಂಡಿ ತಾಲೂಕಿನ ಮರಗೂರ ಗ್ರಾಮದ ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ರೈತರು ಕಳಿಸಿದ ಪ್ರತಿ ಟನ್ ಕಬ್ಬಿಗೆ 100 ಕಡಿತಗೊಳಿಸಲಾಗುತ್ತಿದ್ದು, ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಆರೋಪಿಸಿದ್ದಾರೆ.
ಶನಿವಾರ ಪಟ್ಟಣದ ಶಾಂತೇಶ್ವರ ಸೌಹಾರ್ದ ಸಹಕಾರಿ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರತಿಟನ್ ಕಬ್ಬಿಗೆ 2300 ರೂ ದಲ್ಲಿ ಕಾರಣವಿಲ್ಲದೆ 100 ರೂ ಕಡಿತಗೊಳಿಸುತ್ತಿರುವುದರಿಂದ ರೈತರು ಆತಂಕದಲ್ಲಿದ್ದಾರೆ. ಪ್ರಶ್ನಿಸಿದರೆ ನಮ್ಮ ಕಬ್ಬು ಕಾರ್ಖಾನೆಗೆ ಹೋಗುವುದು ಕಷ್ಟ ಎಂದು ಸುಮ್ಮನಾಗಿದ್ದಾರೆ. ಪ್ರತಿ ಟನ್ ಕಬ್ಬಿಗೆ 100 ರೂ ಕಡಿತಗೋಳಿಸಿದರೆ ರೈತರಿಗೆ ಅನ್ಯಾಯವಾಗುತ್ತದೆ. ಕಳೆದ ಎರಡು ವರ್ಷಗಳಿಂದ ರೈತರು ಸಂಕಷ್ಟದಲ್ಲಿದ್ದಾರೆ, ರೈತರಿಗೆ ಭೀಮಾಶಂಕರ ಸಕ್ಕರೆ ಕಾರ್ಖಾನೆ 100 ರೂ ಕಡಿತ ಮಾಡಿರುವ ರಸೀದಿ ಸಹ ನಬೀಡುತ್ತಿಲ್ಲ.
ಕೂಡಲೆ ಜಿಲ್ಲಾಧಿಕಾರಿಗಳು ಪರೀಶೀಲನೆ ನಡೆಸಿ ರೈತರಿಗೆ ಆಗುವ ಅನ್ಯಾಯ ಸರಿಪಡಿಸಬೇಕು ಎಂದು ಬಿರಾದಾರ ಆಗ್ರಹಿಸಿದರು.