ಕಾಂಗ್ರೆಸ್ ಕಾರ್ಯಕರ್ತರಿಂದ ಬೈಕ್ ರಾ್ಯಲಿ
ಲೋಕದರ್ಶನ ವರದಿ
ಶಿಗ್ಗಾವಿ 26: ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ಖಂಡಿಸಿ ಗಂಗೀಬಾವಿಯ ಸಿ.ಬಿ. ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ ನೇತೃತ್ವದಲ್ಲಿ ಸುಮಾರು ಸಾವಿರಾರು ಕಾರ್ಯಕರ್ತರ ಮುಖಾಂತರ ಬೈಕ್ ರಾ್ಯಲಿ ನಡೆಯಿತು.
ಶಶಿಧರ ಯಲಿಗಾರ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಗುರಿಯಾಗಿಸಿಕೊಂಡು ಬೆದರಿಸುವ ತಂತ್ರ ಅನುಸರಿಸುತ್ತಿದೆ. ಅಭಿವೃದ್ಧಿ ಪರ ಹೇಳಿಕೊಳ್ಳಲು ವಿಷಯ ಇಲ್ಲದ ಕಾರಣ ಕಾಂಗ್ರೆಸ್ ಪಕ್ಷದ ಮುಖಂಡರ ಏಳ್ಗೆ ಸಹಿಸುತ್ತಿಲ್ಲ. ಇದು ಬಹಳ ದಿನಗಳ ಕಾಲ ನಡೆಯಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಪ್ರತ್ಯುತ್ತರ ನೀಡುತ್ತದೆ ಎಂದರು.
ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಭುಲಿಂಗಪ್ಪ ಆಜೂರ, ಸವಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ. ಮುಲ್ಲಾ, ಕಾಂಗ್ರೆಸ್ ಪಕ್ಷದ ವೀಕ್ಷಕ ಪಶ್ಚಿಮ ಬಂಗಾಳದ ಆಶೀಫ್ ಇಕ್ಬಾಲ್ ಮಾತನಾಡಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆಯಿಂದ ಆರಂಭವಾದ ಬೈಕ್ ರಾ್ಯಲಿ ಕಾಮನಹಳ್ಳಿ, ವನಹಳ್ಳಿ, ಮುಗಳಿ, ಗಂಜಿಗಟ್ಟಿ, ಹುಲಗೂರ, ಶಿಶುನಾಳ,ಅತ್ತಿಗೇರಿ, ಬಸವನಾಳ, ಕ್ಯಾಲಕೊಂಡ ಸೇರಿದಂತೆ ಪ್ರಮುಖ ಗ್ರಾಮಗಳಲ್ಲಿ ಸಂಚರಿಸಿತು. ಇದಕ್ಕೂ ಮುನ್ನ ಶಿಗ್ಗಾವಿ ಪಟ್ಟಣದಲ್ಲಿ ಕಿತ್ತೂರ ಚೆನ್ನಮ್ಮ ಪುತ್ಥಳಿಗೆ ಮಾಲಾರೆ್ಣ ಮಾಡಿ ಗೌರವ ಸಲ್ಲಿಸಲಾಯಿತು.
ಬಾಡ ಗ್ರಾಪಂ ಅಧ್ಯಕ್ಷೆ ಚನ್ನಮ್ಮ ಕಾಕೋಳ, ಆಶೀಫ್ ಇಕ್ಬಾಲ್, ರಮೇಶ ದುಗ್ಗತ್ತಿ, ಬಸಲಿಂಗಪ್ಪ ನರಗುಂದ, ಬಸವರಾಜ ಕುರಗೋಡಿ, ಸುರೇಶ ಅರಳಿಕಟ್ಟಿ, ಜೀಶಾನ್ ಖಾನ್ ನಾಗಾಡ, ಅಕ್ಬರ್ ಊದೂದ್ ಉಪಸ್ಥಿತರಿದ್ದರು.