ಮುದ್ದೆಬಿಹಾಲ್

ಬಿದರಕುಂದಿ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಬಿದರಕುಂದಿ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ


ಮುದ್ದೇಬಿಹಾಳ 05:  ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಾಲೆಗಳ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟವು ಕೆಪಿಎಸ್ ಆದರ್ಶ ವಿದ್ಯಾಲಯ ಬಿದರಕುಂದಿಯಲ್ಲಿ  ಜರುಗಿದವು. ಈ ಕ್ರೀಡಾಕೂಟದಲ್ಲಿ ಕೆಪಿಎಸ್  ಸರ್ಕಾರಿ ಆದರ್ಶ ವಿದ್ಯಾಲಯ ಬಿದರಕುಂದಿಯ ಶಾಲೆಯ 14  ವರ್ಷದ ವಯೋಮಿತಿ ಒಳಗಿನ ಬಾಲಕಿಯರ   ಹಾಗೂ 17 ವರ್ಷದ ವಯಮಿತಿಯೊಳಗಿನ  ಬಾಲಕಿಯರ ಬಾಲ್ ಬ್ಯಾಡ್ಮಿಂಟನ್  ಆಟದಲ್ಲಿ ಜಿಲ್ಲಾ ಮಟ್ಟದಲ್ಲಿ ಗೆದ್ದು ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ ಎಂದು ಶಾಲೆ ಮುಖ್ಯೋಪಾಧ್ಯಾಯರಾದ ಅನಿಲ್ ಕುಮಾರ್ ರಾಥೋಡ್, ಎ.ಸಿ.ಕೆರೂರ ಅಧ್ಯಕ್ಷರು  ಸರಕಾರಿ ಗ್ರೇಡ್ 1, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮುದ್ದೇಬಿಹಾಳ ಘಟಕ,  ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಎನ್ .ಎಸ್‌. ಬಿರಾದರ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಡಾ.ಮಲ್ಲಿಕಾರ್ಜುನ್ ಎಂ.ಬೆಳಗಲ್ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ, ತಾಲೂಕ ಪಂಚಾಯತ್ ಮುದ್ದೇಬಿಹಾಳ,  ಬೆಳಗಾವಿ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಶಂಕರ ಚವ್ವಾಣ,  ಕೆ.ಬಿ.ಸಜ್ಜನ ಅಧ್ಯಕ್ಷರು   ಪ್ರಾಥಮಿಕ ಶಾಲಾ  ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮುದ್ದೇಬಿಹಾಳ, ಎ.ಜೆ ದಖನಿ, ಅಂಬಿಕಾ ಲಗಟಗೇರಿ, ಬಾಗೇವಾಡಿಯ ಎ..ಎಸ್‌.ಗಬ್ಬುರ,   ರಮೇಶ್ ಮಠಪತಿ, ಸವಿತಾ ಪವಾರ್,   ಮುಂತಾದವರಿದ್ದರು. ಗೆದ್ದಂತ ಕ್ರೀಡಾಪಟುಗಳಿಗೆ ಶಾಲೆಯ ಎಸ್‌.ಡಿ.ಎಂ.ಸಿ ಸರ್ವ ಸದಸ್ಯರು, ಬಿದರಕುಂದಿ ಗ್ರಾಮದ ಗ್ರಾಮಸ್ಥರು, ಪಾಲಕ ಪೋಷಕರು, ಶಾಲಾ ಶಿಕ್ಷಕ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ 


ಸುದ್ದಿ ಓದಿ