ರಾಣೆಬೆನ್ನೂರ

ದಕ್ಷಿಣ ಕಾಶಿ ಖ್ಯಾತಿಯ ಬಿದರಹಳ್ಳಿ ರೇಣುಕಾಂಬಾ ದೇವಿ ಕಾರ್ತಿಕೋತ್ಸವ

ದಕ್ಷಿಣ ಕಾಶಿ ಖ್ಯಾತಿಯ ಬಿದರಹಳ್ಳಿ ರೇಣುಕಾಂಬಾ ದೇವಿ ಕಾರ್ತಿಕೋತ್ಸವ

ರಾಣೆಬೆನ್ನೂರು 03 : ಮುಂಡರಗಿ ತಾಲೂಕಿನ ದಕ್ಷಿಣ ಕಾಶಿ ಖ್ಯಾತಿಯ ತುಂಗಭದ್ರಾ ನದಿ  ತಟದಲ್ಲಿರುವ ಸುಕ್ಷೇತ್ರ ಬಿದರಹಳ್ಳಿ ( ವೇಣುಪುರಿ ) ಗ್ರಾಮದ ರೇಣುಕಾಂಬಾ ದೇವಿಯ ವಾಷರ್ಿಕ ಸಾಂಪ್ರದಾಯದ ಮಹಾ ಕಾರ್ತಿ ಕೋತ್ಸವವು, ಇದೆ ಶಾಲಿವಾಹನ ಶಕೆ,1944ನೇ ಶುಭಕೃ ತು ನಾಮ ಸಂವತ್ಸರ  ಕಾತರ್ಿಕ ಮಾಸ ಶುದ್ಧ ಡಿ. 6, 7ರಂದು ಎರಡು ದಿವಸಗಳ ಕಾಲ ಅತ್ಯಂತ ವಿಜ್ರಂಭಣೆಯಿಂದ ಜರುಗಲಿದೆ ಎಂದು ರೇಣುಕಾಂಬಾ ದೇವಿ ಸೇವಾ ಸಮಿತಿಯ ಅಧ್ಯಕ್ಷ ಆರ್. ಬಿ. ಪಾಟೀಲ್, ಹಾಗೂ ಕಾರ್ಯದಶರ್ಿ ಎನ್. ಎನ್.ಬಾಳಿಕಾಯಿ  ಮತ್ತು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಂಗಳವಾರ ಸಂಜೆ 4 ಗಂಟೆಗೆ, ಕಾರ್ತಿ ಕೋತ್ಸವ ನಂತರ ಸಂಜೆ 6 ರಾತ್ರಿ 11 ರವರೆಗೆ ಸಾರ್ವಜನಿಕವಾಗಿ ನಾಡಿನಾದ್ಯಾಂತ ಬರುವ ಸರ್ವ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಿಸಲಾಗುವುದು. ಮತ್ತು ರಾತ್ರಿ ಶ್ರೀದೇವಿಯ ಧ್ವಜದ ಲೀಲಾವು ಜರುವುದು. ನಂತರ ಶ್ರೀದೇವಿಯ ಭವ್ಯ ಉತ್ಸವದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಡಿ.7ರಂದು ಸಂಜೆ ಓಕುಳಿ, ಧಾರ್ಮಿಕ ಕಾರ್ಯಕ್ರಮವು ನಡೆಯಲಿದೆ. ವಾರ್ಷಿಕ ಮಹಾ  ಕಾತರ್ಿಕೋತ್ಸವದ ಅಂಗವಾಗಿ, ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದ ನ್ಯೂ ಗಜಾನನ ಮ್ಯೂಸಿಕಲ್ ಬ್ರಾಸ್ ಬ್ಯಾಂಡ್ ಆರ್ಕಿಸ್ಟ್ರಾ ತಂಡದವರಿಂದ ಮನೋರಂಜನಾ ಕಾರ್ಯಕ್ರಮಗಳು ಹಾಗೂ  ಗ್ರಾಮದ ಭಜನಾ ತಂಡಗಳಿಂದ ಮತ್ತು ಡೊಳ್ಳು ಮೇಳಗಳ ಮೆರವಣಿಗೆ ನಡೆಯಲಿದೆ.ಸಾರ್ವಜನಿಕ ಭಕ್ತಾದಿಗಳು ಪ್ರಕಟಣೆಯನ್ನು ಗಮನಿಸಿ, ಕಾತರ್ಿಕೋತ್ಸವದಲ್ಲಿ ಪಾಲ್ಗೊಂಡು, ರೇಣುಕಾಂಬಾ ದೇವಿಯ ಕೃಪೆಗೆ ಪಾತ್ರರಾಗುವಂತೆ ಸೇವಾ ಸಮಿತಿಯು ಕೋರಿದೆ 

ಸುದ್ದಿ ಓದಿ