ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ಧಾರವಾಡ 16: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಧಾರವಾಡ ಶಹರದ ವಾರ್ಡ್ ನಂ.23 ರಲ್ಲಿನ ಯಾಲಕ್ಕಿ ಶೆಟ್ಟರ್ ಕಾಲೋನಿಯ ಇಂದಿರಾ ನಗರ ಹಾಗೂ ಹೊಂಡದ ವೀರಭದ್ರೇಶ್ವರ ನಗರದ ಒಳ ರಸ್ತೆಗಳಿಗೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಸಂಗಣ್ಣ ಹಿತ್ತಲಮನಿ, ರೂಪಾ ಈರೇಶನವರ್, ಸ್ವಪ್ನಿಲ್ ಸಾಬ್ಳೆ , ಸುಖದೇವ ಬಾಡಗಿ, ನೆಹರು ನಿಡವಣಿ, ಹಿರಿಯರಾದ ರಾಜು ಸೋಲಾಪುರಕರ, ಬಸಪ್ಪ ದೊಡ್ಡಮನಿ, ರಾಚಯ್ಯಾ ಮಠಪತಿ, ಯುವರಾಜ ಕಲಾಲ, ಶಂಕರ ದೇವರೆಡ್ಡಿ, ಕೃಷ್ಣ ಕುಲಕರ್ಣಿ, ಗೀರೀಶ ಮುದಕವಿ, ಸುವರ್ಣ ವಾಲಿ, ರೇಣುಕಾ ಆಲದಮರದ, ಸುಧಾ ಕಲಾಲ, ಸಾಧನಾ ಸೋಲಾಪುರಕರ, ಪುಷ್ಪಾ ಕೋಟಬಾಗಿ ಸೇರಿದಂತೆ ಇನ್ನಿತರರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.