ಕಾರ್ಮಿಕರ ವಿಶ್ರಾಂತಿ ಗ್ರಹ ಕಟ್ಟಡದ ಭೂಮಿ ಪೂಜಾ ಸಮಾರಂಭ
ರಾಣೇಬೆನ್ನೂರು24: ಹಾವೇರಿ ಜಿಲ್ಲೆಯಲ್ಲಿಯೇ ಬಹುದೊಡ್ಡದಾದ ವಾಣಿಜ್ಯ ಕೇಂದ್ರ ಸ್ಥಾನವಾದ ಇಲ್ಲಿ ರೈಲ್ವೆ ವ್ಯಾಗಿನಗಳಿಗೆ, ಮೆಕ್ಕೆಜೋಳ ತುಂಬುವ ಹಮಾಲಿ ಕಾರ್ಮಿಕರಿಗೆ ವಿಶ್ರಾಂತಿಗೆ ಯಾವುದೇ, ಕಟ್ಟಡವಿಲ್ಲದೆ ನಿತ್ಯವೋ ಪರಿತಪಿಸುವಂತಾಗಿತ್ತು. ಕೊನೆಗೂ ಕೇಂದ್ರ ಸರ್ಕಾ ರ, ಮಂಜುರಾತಿ ನೀಡಿರುವುದು ಸಂತೋಷ ತಂದಿದೆ ಎಂದು ರೈಲ್ವೆ ಮೇಲ್ ಸೇತುವೆ ನಿರ್ಮಾಣ ಹೋರಾಟ ಸಮಿತಿ ಸದಸ್ಯ ಜಗದೀಶ್ ಕೆರೋಡಿ ತಮ್ಮ ಹರ್ಷ ವ್ಯಕ್ತಪಡಿಸಿದರು.
ರೈಲ್ವೆ ನಿಲ್ದಾಣದ ಬಳಿ ಆರಂಭಗೊಂಡ ಕಾರ್ಮಿಕರ ವಿಶ್ರಾಂತಿ ಗ್ರಹ ಕಟ್ಟಡದ ಭೂಮಿ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ನಗರದ ಹಮಾಲರು ತಮ್ಮ ದಿನನಿತ್ಯದ ಕಾಯಕವಾಗಿ ವ್ಯಾಗನಗಳಿಗೆ ಮೆಕ್ಕೆಜೋಳ ತುಂಬುವ ಕಾಯಕ ಕಳೆದ 30 ವರ್ಷಗಳಿಂದ ಮಾಡುತ್ತಿದ್ದಾರೆ. ಅದಕ್ಕಾಗಿ ಕಾಮರ್ಿಕರ ಬೇಡಿಕೆ ಯನಿಟ್ಟುಕೊಂಡು ಹಲವಾರು ಬಾರಿ, ಹೋರಾಟ ಧರಣಿ ಪ್ರತಿಭಟನೆ ನಡೆದು ರೈಲ್ವೆ ಇಲಾಖೆಯ ಗಮನ ಸೆಳೆಯಲಾಗಿತ್ತು ಕೊನೆಗೂ ಫಲದಕ್ಕಿದಂತಾಗಿದೆ ಎಂದರು. ತಾಲೂಕಿನಿಂದ ಬೇರೆ ಬೇರೆ ಭಾಗಕ್ಕೆ ರೈತರ ಉತ್ಪನ್ನಗಳಾದ ಮೆಕ್ಕೆಜೋಳ ಕಳಿಸುವ ಇಲ್ಲಿನ ವರ್ತಕರು ಮುಖ್ಯ ವ್ಯವಹಾರ ಕೇಂದ್ರವಾಗಿಸಿ ಕೊಂಡಿದ್ದಾರೆ ಇದರಿಂದಾಗಿ ರೈಲ್ವೆ ಇಲಾಖೆಗೆ ವಾಷರ್ಿಕ ಸರಾಸರಿ 200, ನೂರು ಕೋಟಿಗೂ ಹೆಚ್ಚು ಲಾಭವಾಗುತ್ತದೆ.
ಇಲ್ಲಿ ಕಜ್ಜರಿ, ಬುಡಪನಹಳ್ಳಿ, ಹುಲಿ ಹಳ್ಳಿ, ಹುಲ್ಲತ್ತಿ, ಕಾಕೋಳ, ದೇವರಗುಡ್ಡ, ಹೊಳಲು, ಗುತ್ತಲ, ಹೊನ್ನತ್ತಿ ಸೇರಿದಂತೆ ಮತ್ತಿತರೇ ಗ್ರಾಮಗಳ 150ಕ್ಕೂ ಹೆಚ್ಚು ಕಾಮರ್ಿಕರು ನಿತ್ಯವೋ ಕೆಲಸ ಮಾಡುತ್ತಾರೆ ಎಂದು ಜಗದೀಶ್ ಕೆ ರೋಡಿ ವಿವರಿಸಿದರು. ರೈಲ್ವೆ ನಿಲ್ದಾಣ ಪಕ್ಕದಲ್ಲಿ ಇಲಾಖೆಗೆ ಸೇರಿದ ಭೂಮಿಯಲ್ಲಿ ಈ ವಿಶ್ರಾಂತಿ ಕೋಠಡಿ ನಿಮರ್ಾಣಕ್ಕೆ ಇಂದು ಚಾಲನೆ ನೀಡಲಾಗಿದೆ.ಎಂದು ವಿವರಿಸಿದ ಗುತ್ತಿಗೆದಾರ ದರ್ಶನ್ ಕುಮಾರ ಡಿ ಅವರು, 33 ಲಕ್ಷ ರೂಗಳಲ್ಲಿ ನಿಮರ್ಾಣವಾಗಲಿದೆ ಎಂದರು ಪೂಜಾ ಕಾರ್ಯಕ್ರಮದಲ್ಲಿ ಹೋರಾಟ ಸಮಿತಿಯ ಮುಖಂಡರಾದ ರಾಜಣ್ಣ ಎನ್ ಪಾಟೀಲ್, ಎಸ್ ಎಸ್ ಸಣ್ಣಗೌಡ್ರ, ಮಲ್ಲಪ್ಪ ಕಂಬಳಿ, ಉಚ್ಚೆಗೇಪ್ಪ, ಹೂಳಲು, ರಮೇಶ ಮಳಗಿ, ಪ್ರಶಾಂತ್ ಗುಜ್ಜರ್, ಚಂದ್ರು ಗಾಲಿ, ಮಲ್ಲೇಶ್ ಚಳಗೇರಿ, ಗಣೇಶ್ ಕಂಬಳಿ,ಬೀರಪ್ಪ ಗಾಡಿ,ಮಾರುತಿ ದೊಡ್ಡಮನಿ,ಗುತ್ತೇಪ್ಪ ಗಾಡಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು