ಭೋವಿ ಸಮಾಜ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದೆ
ಶಿಗ್ಗಾವಿ 05: ಕಳೆದ 20 ವರ್ಷಗಳಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಸದ ಪ್ರಹ್ಲಾದ ಜೋಶಿಯವರ ಮಾರ್ಗದರ್ಶನದಲ್ಲಿ ಭೋವಿ ಸಮಾಜ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದೆ ಎಂದು ಶಿಗ್ಗಾವಿ ತಾಲೂಕಾ ಭೋವಿ ಸಮಾಜದ ಅಧ್ಯಕ್ಷ ಅರ್ಜುನಪ್ಪಾ ಹಂಚಿನಮನಿ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಲಾಗಿದ್ದ ತಾಲೂಕಾ ಭೋವಿ ಸಮಾಜದ ಸಭೆಯಲ್ಲಿ ಮಾತನಾಡಿ, ಇಲ್ಲಿಯವರೆಗೂ ಸಮಾಜಕ್ಕೆ ಸ್ಪಂದಿಸುತ್ತಾ ಬಂದಿರುವ ಪ್ರಹ್ಲಾದ ಜೋಶಿಯವರಿಗೆ ಈ ಚುನಾವಣೆಯಲ್ಲಿ ಗೆಲ್ಲಿಸಿ, ವಿಜಯೋತ್ಸವ ಆಚರಿಸಿ ಸಮಾಜದ ಬೇಡಿಕೆಗಳನ್ನು ಪಡೆದುಕೊಳ್ಳುವುದಗಿ ಅವರು ಹೇಳಿದರು.
ಪ್ರಹ್ಲಾದ ಜೋಶಿ ಮಾತನಾಡಿ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಮಾಜದ ಎಲ್ಲ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಿದ್ದು, ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಸಮಾಜದ ಹಿರಿಯರಾದ ಅರ್ಜುನಪ್ಪಾ ಹಂಚಿನಮನಿಯೊಂದಿಗೆ 25 ವರ್ಷಗಳ ಆತ್ಮೀಯ ಒಡನಾಟವಿದ್ದು ಸಮಾಜದ ಬೆನ್ನೆಲುಬಗಿ ನಿಲ್ಲುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಭೋವಿ ಸಮಾಜದ ವತಿಯಿಂದ ಪ್ರಹ್ಲಾದ ಜೋಶಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿವಾನಂದ ಮ್ಯಾಗೇರಿ, ಸುಭಾಷ ಚೌವಾಣ, ಪ್ರಶಾಂತ ಬಡ್ಡಿ, ಮುತ್ತು ಯಲಿಗಾರ, ಮಂಜುನಾಥ ಮಿರ್ಜಿ, ಭೋವಿ ಸಮಾಜದ ಮುಖಂಡರಾದ ಮಂಜುನಾಥ್ ಗುಡಿಗೇರಿ, ಮಹೇಶ್ ಕುರಂದ್ವಾಡ, ಹನುಮಂತಪ್ಪ ತೆಮ್ಮಿನಕೊಪ್ಪ ಶಟ್ಟಪ್ಪ ವಡ್ಡರ್, ಬಸವರಾಜ್ ವಡ್ಡರ್, ನಿಂಗಪ್ಪ ಹುರಳಿಕೋಪ್ಪಿ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ವಿವಿಧ ಗ್ರಾಮಗಳ ಭೋವಿ ಸಮಾಜದ ಮುಖಂಡರು ಮಹಿಳೆಯರು ಯುವಕರು ಉಪಸ್ಥಿತರಿದ್ದರು.