ಸ್ಮಶಾನ ರಸ್ತೆ ಅಭಿವೃದ್ಧಿ, ಸಿಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ
ರಾಣಿಬೆನ್ನೂರು 20: ಶ್ರೀಸಾಮಾನ್ಯರಿಗಾಗಿ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಾದ 5 ಗ್ಯಾರಂಟಿಗಳ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಅಭಿವೃದ್ಧಿಗಾಗಿ ಹಣವನ್ನು ಮೀಸಲಿಡಲು ಗಂಭೀರವಾಗಿ ಚಿಂತಿಸುತ್ತಿದ್ದಾರೆ ಎಂದು ಬ್ಯಾಡಗಿ ವಿಧಾಸಭಾ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಸೋಮವಾರ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ತಾಲೂಕಿನ ಉಕ್ಕುಂದ ಗ್ರಾಮದಲ್ಲಿನ ಸುಮಾರು 800 ಮೀಟರ್ ಉದ್ದದ ಸ್ಮಶಾನ ರಸ್ತೆ ಅಭಿವೃದ್ಧಿ ಮತ್ತು ಸಿಡಿ ನಿರ್ಮಾಣ ಕಾಮಗಾರಿಗೆ 70 ಲಕ್ಷಗಳ ಅನುದಾನದಲ್ಲಿ ಗುದ್ದಲಿ ಪೂಜೆ ನೆರವೇಸಿ ಮಾತನಾಡಿದರು.
ವೀರನಗೌಡ ಪೊಲೀಸಗೌಡ್ರ, ಮಂಜಣ್ಣ ಆನ್ವೇರಿ, ಮಂಜಪ್ಪ ಹಾವನೂರ, ರೇಷ್ಮಬಾನು, ಸೋಮನಗೌಡ ಪಾಟೀಲ, ಬೀಮನಗೌಡ ಬೆಳಕೇರಿ, ಗುಡ್ಡನಗೌಡ ಬೆಳಕೇರಿ, ಶಿವಾನಂದ ಮಾಳೇನಹಳ್ಳಿ, ಈರ್ಪ ಬಿಸಲಳ್ಳಿ, ಬಸವರಾಜ ಕೋಟಿಹಾಳ, ಬಸಪ್ಪ ಓಲೇಕಾರ, ಹನುಮಂತಪ್ಪ ಹಾದಿಮನಿ, ರವಿ ಕದರಮಂಡಲಗಿ, ನೀಲಪ್ಪ ಕಾನಬಸಣ್ಣನವರ ಮತ್ತಿತರರು ಇದ್ದರು.