ಇಂಡಿ

ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಮ್ಮ ಪೂರ್ವಜರ ಕನಸು: ಪಾಟೀಲ

ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಮ್ಮ ಪೂರ್ವಜರ ಕನಸು: ಪಾಟೀಲ

ಇಂಡಿ: ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಲು ಸಾಕಷ್ಟು ಕಷ್ಟ, ಕಾರ​‍್ಪಣಯಗಳನ್ನು ಅನುಭವಿಸಿ ಕಾರ್ಖಾನೆ ಪ್ರಾರಂಭಿಸಿದ್ದೇನೆ. ಈಗ ಸಕ್ಕರೆ ಉಧ್ಧಿಮೆ ಹಿಂದಿನಂತೆ ಲಾಭಾಂಶದಲ್ಲಿ ಇಲ್ಲ. ಹೀಗಾಗಿ ಸಕ್ಕರೆ ಕಾರ್ಖಾನೆ ಸಾಲದ ಋಣಭಾರದಲ್ಲಿದೆ ಎಂದು ಕಾರ್ಖಾನೆಯ ಅಧ್ಯಕ್ಷ, ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು. 

ಅವರು ಶುಕ್ರವಾರ ತಾಲೂಕಿನ ಮರಗೂರ ಗ್ರಾಮದ ಸಮೀಪವಿರುವ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ 2020-21ನೇ ಸಾಲಿನ 3ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಮ್ಮ ಪೂರ್ವಜರ ಕನಸಾಗಿತ್ತು. ಕಳೆದ ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದ ಕಾರ್ಖಾನೆಗೆ ನಾನು ಶಾಸಕನಾದ ಮೇಲೆ ಹೆಚ್ಚಿನ ಕಾಳಜಿವಹಿಸಿ  ಸಿಂದಗಿ, ಇಂಡಿ ಭಾಗದ ರೈತರ ಆಸ್ತಿಯನ್ನಾಗಿ ಮಾಡಿರುವೆ ಎಂದರು. 

ಇಂದು ಸಹಕಾರಿ ಸಕ್ಕರೆ ಕಾರ್ಖಾನೆ ಸಾಕಷ್ಟು ಸಾಲದ ಖಣಭಾರದಲ್ಲಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಕ್ಕರೆ ಉದ್ದಿಮೆ ಹಿಂದಿನಂತೆ ಇಂದು ಲಾಭಾಂಶದಲ್ಲಿ ಇಲ್ಲ. ನಂದಿ ಸಕ್ಕರೆ ಕಾರ್ಖಾನೆ ಸಾಕಷ್ಟು ಪ್ರಗತಿ ಸಾಧಿಸಿದೆ. ಅದರ ಪರಿಕಲ್ಪನೆಯಿಂದ ಭೀಮಾ ದಡದ ಭಾಗದಲ್ಲಿ ಇದು ಕೂಡಾ ರೈತರಿಗೆ ಮುಕುಟಪ್ರಾಯವಾಗಿ ಬೆಳೆಯಲಿ ಪೂರ್ವಜರ ಕನಸು ಸಹಕಾರಗೊಳ್ಳಲಿ ಎಂಬ ಸದಾಶಯದಿಂದ ಕಾರ್ಯಾರಂಭ ಮಾಡಲಾಗಿದೆ ಎಂದರು. 

ಸಾಲದ ಸುಳಿಯಲ್ಲಿದ್ದರೂ ಸಹಕಾರಿ ಸಕ್ಕರೆ ಕಾರ್ಖಾನೆ ಈ ಭಾಗದ ಜನರ ಆಶೋತ್ತರ ಈಡೇರಿಸುವಲ್ಲಿ ಶ್ರಮಿಸುತ್ತಿದೆ. ರೈತರು ಸಾಕಷ್ಟು ಕಷ್ಟ ನಷ್ಟಗಳ ಮಧ್ಯ  ಶ್ರಮದಿಂದ ಕಬ್ಬು ಬೆಳೆಯುತ್ತಾರೆ. ತೂಕದಲ್ಲಿ ಮೋಸ ಮಾಡಿದರೆ ತಂದೆ-ತಾಯಿಗಳಿಗೆ ಮೋಸ ಮಾಡಿದಂತಾಗುತ್ತದೆ. ನಮ್ಮ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸವಿಲ್ಲ ಎಂದು ಸ್ಪಷ್ಠಪಡಿಸಿದರು. 

ಕಾರ್ಖಾನೆ ಈಗ ಮೂರುನೂರು ಕೋಟಿ ಸಾಲ ಇದೆ. ಪ್ರತಿ ಮಾರ್ಚದಲ್ಲಿ 65 ರಿಂದ 70 ಲಕ್ಷ ರೂಪಾಯಿ ಕಂತು ಬಡ್ಡಿ ಸಮೇತ ಕಟ್ಟಲಾಗುತ್ತಿದೆ. ತಾಲೂಕಿನ ಹಿರೇಬೇವನೂರ ಗ್ರಾಮದ ಶಿವುಕುಮಾರ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದ.ೆ ಇದಕ್ಕೆ ಕಾರಣ ಸರಕಾರ ನಿರ್ಧರಿಸಿರುವ ಎಫ್ ಆರ್‌.ಪಿ, ಎಸ್‌.ಎ.ಪಿ  ಕೇಂದ್ರ ಸರಕಾರ ಸಕ್ಕರೆ ಕಾರ್ಖಾನೆಗಳಿಗೆ ಒಂದೇ ನಿಯಮ ಮಾಡಿರುವದರಿಂದ ಸಕ್ಕರೆ ಕಾರ್ಖಾನೆಗಳು ಸಾಲದಲ್ಲಿ ಸಿಲುಕಿಕೊಂಡಿವೆ ಇಂತಹ ಅವೈಜ್ಞಾನಿಕ ನೀತಿ ಕೈ ಬೀಡಬೇಕು ಎಂದು ಕೇಂದ್ರ ಸಹಕಾರಿ ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದರು. 

ಕೇಂದ್ರ ಸರಕಾರ ಯಥೇನಾಲ್, ಡಿಸ್‌ಲೇರಿ ದೊಡ್ಡಪ್ರಮಾಣದಲ್ಲಿ ಸಹಾಯ ಮಾಡಿದೆ ರೈತರ ಪರವಾಗಿ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. 

ಉಪಾಧ್ಯಕ್ಷ ವಿಶ್ವನಾಥ ಬಿರಾದಾರ, ನಿದೇರ್ಶಕರಾದ ಎಂ.ಆರ್‌. ಪಾಟೀಲ, ಧಾನಮ್ಮಗೌಡತಿ ಬಿರಾದಾರ, ಜೆಟ್ಟೆಪ್ಪ ರವಳಿ, ಬಿ.ಎಂ ಕೋರೆ, ಅಶೋಕ ಗಜಾಕೋಶ, ಸುರೇಶಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಮಹಾದೇವಸಾಹುಕಾರ ನಾಗರೆ, ಲಲಿತಾ ನಡಗೇರಿ, ಅರ್ಜುನ ನಾಯ್ಕೋಡಿ, ಉಪನಿಭಂದಕ ಚಿದಾನಂದ ನಿಂಬಾಳ ವೇದಿಕೆಯಲ್ಲಿದ್ದರು. 

ಸುದ್ದಿ ಓದಿ