ರಾಣೆಬೆನ್ನೂರ

ವೆಂಕಟೇಶ್‌ಗೆ ಆದರ್ಶ ಶಿಕ್ಷಕರತ್ನ ಪ್ರಶಸ್ತಿ ರಂಗಕರ್ಮಿ

ವೆಂಕಟೇಶ್‌ಗೆ ಆದರ್ಶ ಶಿಕ್ಷಕರತ್ನ ಪ್ರಶಸ್ತಿ ರಂಗಕರ್ಮಿ

ರಾಣೇಬೆನ್ನೂರ 10: ಕೋಲಾರ ನಗರದಲ್ಲಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್‌ರವರ 135 ಜನ್ಮದಿನೋತ್ಸವದ ಶಿಕ್ಷಕರ ದಿನಾಚರಣೆ ಸಮಾರಂಭವು ಇತ್ತೀಚೆಗೆ ನಡೆಯಿತು. ಸಾರ್ವಜನಿಕವಾಗಿ ನಡೆದ ಬೃಹತ್ ಸಮಾರಂಭದಲ್ಲಿ ರಾಣೇಬೆನ್ನೂರು ನಗರದ ಸಾಂಸ್ಕೃತಿಕ ಸಂಘಟಿಕ, ರಂಗ ಕುಸುಮ ಕಲಾಕೇಂದ್ರದ ಸಂಸ್ಥಾಪಕ, ಸಾಹಿತಿ ಶಿಕ್ಷಕ ಹಾಗೂ ರಂಗಕರ್ಮಿ. ವೆಂಕಟೇಶ ಈಡಿಗರ ಅವರಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು,  ಆದರ್ಶ ಶಿಕ್ಷಕರತ್ನ ಪ್ರಶಸ್ತಿ  ಪ್ರಧಾನ ಮಾಡಿ  ಗೌರವಿಸಲಾಯಿತು. ಹಾಗೂ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು, ಅತಿಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ