ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ : ಎಲ್ ಮಧುನಾಯ್ಕ
ಹೂವಿನ ಹಡಗಲಿ: ಸಾಹಿತಿಗಳ ಸತತ ಅದ್ಯಯನ ಮತ್ತು ಸಂಶೋಧನೆಯಿಂದ ಸಾಹಿತ್ಯ ಕ್ಷೇತ್ರ ಸದೃಡವಾಗಿ ಬೆಳೆಯುತ್ತದೆ ಜತೆಗೆ ಸಾಹಿತಿಗಳಿಲ್ಲದೆ ಸಮಾಜದ ಅಭಿವೃದ್ಧಿ ಅಸಾದ್ಯ ಎಂದು ನಿವೃತ್ತಿ ಶಿಕ್ಷಕರು ಮತ್ತುಹಿರಿಯ ಕವಿ ಎಂ ಪಿ ಎಂ ಕೊಟ್ರಯ್ಯ ಹೇಳಿದರು.ತಾಲೂಕಿನ ಸೋಗಿ ಗ್ರಾಮದಲ್ಲಿ ರಾಜ್ಯ ಬರಹಗಾರರ ವೇದಿಕೆ ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿನ ಸಮಸ್ಯೆಗಳನ್ನು ಲೇಖನ. ಕ್ರತಿಗಳ ಮೂಲಕ ಜನರಿಗೆ ತಿಳುಸುವ ಕಾರ್ಯ ವನ್ನು ಸಾಹಿತಿಗಳು ಮಾಡುತ್ತಿದ್ದಾರೆ ಎಂದ ಅವರು ಯುವ ಕವಿಗಳು ಹಳೆಗನ್ನಡದ ಕವಿ ಕಾವ್ಯಗಳನ್ನು ಹೆಚ್ಚು ಓದಬೇಕು. ಅನುಭವದ ಮೂಲಕ ಕವಿತೆ ರಚನೆಗೆ ಮುಂದಾಗಬೇಕು ಎಂದರು. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕವಿ ಶಿಕ್ಷಕ ಎಲ್ ಮಧುನಾಯ್ಕ ರವರನ್ನು ಸನ್ಮಾನಿಸಲಾಯಿತು.ಕವಿಗೋಷ್ಠಿ: ನಾಗರಾಜ ಮಲ್ಟಿಒಡೆಯರ್, ನೂರ್ ಪಾಷಾ, ರೇಣುಕಾ ಯು, ಶೋಭಾ ಮಲ್ಟಿಒಡೆಯರ್, ಎ ಚಂದ್ರ್ಪ, ಅಶೋಕ್ ಇದ್ದರು.