ಇಂಡಿ

ಬೇಂದ್ರೆಯವರ ಜನ್ಮ ದಿನಾಚರಣೆ

ಬೇಂದ್ರೆಯವರ ಜನ್ಮ ದಿನಾಚರಣೆ


ಇಂಡಿ: ಪಟ್ಟಣದ ಎಸ್‌ಎಸ್‌ವಿವಿ ಸಂಘದ ಜಿ.ಆರ್‌.ಗಾಂಧಿ ಕಲಾ, ವಾಯ್‌.ಎ.ಪಾಟೀಲ ವಾಣಿಜ್ಯ ಹಾಗೂ ಎಮ್‌ಎಫ್‌.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ  ಸೋಮವಾರ ದ.ರಾ.ಬೇಂದ್ರೆ ರವರ 126 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶಾಲಿನಿ ಎಂ ದೋಶಿ ಮಹಿಳಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸದಾನಂದ ಎಸ್ ಈರನಕೇರಿ ಅವರು ಮಾತನಾಡಿ, “ದ್ವಂದ್ವ ಧ್ವನಿಯ ಸಾಂಖ್ಯಿಕ ಅರ್ಥ ನೀಡುವ ಬೇಂದ್ರೆಯವರ ಕಾವ್ಯಗಳನ್ನು ಅರ್ಥೈಸಿಕೊಳ್ಳುವುದು ಕಷ್ಟಸಾಧ್ಯವಿದೆ. ಅವರು ಉತ್ತರ ಕರ್ನಾಟಕದ ಜನಪದ ಭಾಷೆಯನ್ನು ಬಳಸಿಕೊಂಡು ಕಾವ್ಯಗಳನ್ನು ರಚಿಸಿ ಶಬ್ದಗಾರುಡಿಗರಾದರು. ವೈಯಕ್ತಿಕ ಜೀವನವು ಬಹಳ ಕಷ್ಟ-ನಷ್ಟಗಳಿಂದ ತುಂಬಿದ್ದರೂ ಕನ್ನಡ ಸಾಹಿತ್ಯ ಸೇವೆಗೈದಿರುವುದು ಹೆಮ್ಮೆಯ ಸಂಕೇತವಾಗಿದೆ. ಬೇಂದ್ರೆಯವರ ಮನೆಯಲ್ಲಿ ಶಿಷ್ಟಭಾಷೆಯನ್ನು ಅನುಸರಿಸುವ ಪರಂಪರೆಯಿದ್ದರು ಜಾನಪದ ಸೊಗಡಿನಲ್ಲಿ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಭಾರತೀಯ ಸಾಹಿತ್ಯದಲ್ಲಿ ಮುಂಚೂಣಿಗೆ ತಂದಿದ್ದಾರೆ ಎಂದು ಹೇಳುತ್ತಾ  ಬೆಂದ್ರೆಯವರ ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್‌.ಬಿ.ಜಾಧವ ಮಾತನಾಡಿ,  “ಬೇಂದ್ರೆಯವರ ಕಾವ್ಯಗಳು ಜಾನಪದ ಶೈಲಿ ಹಾಗೂ ಗೇಯತೆಯ ಸೊಗಡಿನಿಂದ ಕೂಡಿದ್ದರಿಂದ ಹೆಚ್ಚು ಪ್ರಸಿದ್ದಿಯನ್ನು ಪಡೆದಿವೆ.” ಎಂದು ಹೇಳಿದರು. 

ಮಹಾವಿದ್ಯಾಲಯದ ಡಾ.ಎ.ಸಿ.ನಡುವಿನಮನಿ, ಡಾ.ವಿಶ್ವಾಸ ಕೋರವಾರ ,ಡಾ.ಪಿ.ಕೆ.ರಾಠೋಡ, ಡಾ.ಸುರೇಂದ್ರ ಕೆ, ಡಾ.ಸಿ.ಎಸ್‌.ಬಿರಾದಾರ,  ಶ್ರೀ.ಶ್ರೀಕಾಂತ ರಾಠೋಡ, ಶ್ರೀ.ಮಲ್ಲಕಾರ್ಜುನ ಕೋಣದೆ, ಶೀ.ಆರ್‌.ಪಿ.ಇಂಗನಾಳ, ಬೋಧಕ ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿ ಸಚಿನ ಮಾಶ್ಯಾಳಕರ, ಸಹಾಯಕ ಪ್ರಾಧ್ಯಾಪಕರಾದ ಶ್ರೀಶೈಲ ಸಣ್ಣಕ್ಕಿ ಸ್ವಾಗತ ಮತ್ತು ಪರಿಚಯ  ವಂದನಾರೆ​‍್ಣಯನ್ನು ವಿದ್ಯಾರ್ಥಿನಿ ಸೋನಾಲಿ ಘೋಡಕೆ  ಅವರು ನಿರ್ವಹಿಸಿದರು. 


ಸುದ್ದಿ ಓದಿ