ಸಿರುಗುಪ್ಪ ಜೂಜಾಟ ತಡೆಗೆ ಕಟ್ಟುನಿಟ್ಟಿನ ಕ್ರಮ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು
ಸಿರುಗುಪ್ಪ 31: ಬಳ್ಳಾರಿ ಜಿಲ್ಲೆಯಲ್ಲಿ ಮಟ್ಕಾ ಜೂಜಾಟ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೇಳಿದರು ಸಿರುಗುಪ್ಪ ನಗರದ ಪೊಲೀಸ್ ಠಾಣೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜಿಲ್ಲೆಯಾದ್ಯಂತ ಜೂಜಾಟ ತಡೆಗೆ ಕಾರ್ಯಾಚರಣೆ ನಡೆದಿದೆ 105 ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ ಜೂಜಾಟ ನಿರತರು ಇದಕ್ಕೆ ಸಹಕರಿಸಿದ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು .ಸಿರುಗುಪ್ಪ ತಾಲ್ಲೂಕಿನ ಜನ ಶಾಂತಿ ಪ್ರಿಯರು ರಾಗಿದ್ದಾರೆ ಜಿಲ್ಲೆಯ ವಾಹನ ಸವಾರರು ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಇದರಿಂದಾಗಿ ಅಪಘಾತ ಸಂಭವಿಸುತ್ತಿವೆ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಆಂಧ್ರಪ್ರದೇಶದಿಂದ ಅಕ್ರಮವಾಗಿ ಪಡಿತರ ಅಕ್ಕಿ ನಮ್ಮ ಜಿಲ್ಲೆಗೆ ಬರುತ್ತಿದೆ ಸಿರುಗುಪ್ಪ ತಾಲ್ಲೂಕಿನಿಂದ ಅಲ್ಲಿಗೆ ಮರಳು ಮದ್ಯ ಗರಸು ಅಕ್ರಮವಾಗಿ ರವಾನೆಯಾಗುತ್ತಿದೆ ಇದರ ತಡೆಗೆ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿ ಸಬೇಕು ಎಂಬ ಸಲಹೆಯನ್ನು ಪರಿಶೀಲನೆ ಮಾಡುವುದಾಗಿ ತಿಳಿಸಿದರು.ಸಿರುಗುಪ್ಪ ನಗರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಬಾರ್ಬರ್ ಶಾಪ್ ತೆಗೆದಿದ್ದ ಇದಕ್ಕೆ ಸವಿತಾ ಸಮಾಜದವರು ಆಕ್ಷೇಪಿಸಿದ್ದರು ಈ ಬಗ್ಗೆ ಅವರ ನಡುವೆ ಮಾತುಕತೆಯಾಗಿದ್ದರೂ ನಿರ್ಣಯಕ್ಕೆ ಬಂದಿರಲಿಲ್ಲ ಶನಿವಾರ ಸಂಜೆ ಸವಿತಾ ಸಮಾಜದ ಮುಖಂಡ ರಾಘವೇಂದ್ರನ ಮೇಲೆ ನಾಲ್ವರು ಮುಸುಕುಧಾರಿಗಳು ಹೊರ ವಲಯ ಬಳಿ ಹಲ್ಲೆ ಮಾಡಿದರು ಹಲ್ಲೆಗೊಳಗಾದ ವ್ಯಕ್ತಿಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ 9ಜನರ ಮೇಲೆ ಪ್ರಕರಣ ದಾಖಲಾಗಿದೆ ಹಲ್ಲೆ ಮಾಡಿದವರು ಮುಸುಕು ಹಾಕಿಕೊಂಡಿದ್ದರಿಂದ ಅವರನ್ನು ಗುರುತಿಸಲು ಆಗಿಲ್ಲ ತನಿಖೆ ನಡೆಯುತ್ತಿದೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಅವರು ತಿಳಿಸಿದರು.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಟರಾಜ್ ಸಿರುಗುಪ್ಪ ಉಪವಿಭಾಗ ಪೊಲೀಸ್ ಅಧೀಕ್ಷಕ ಎಂ ಜಿ ಸತ್ಯನಾರಾಯಣ ರಾವ್,ಸಿಪಿಐ ಯಶವಂತ ಬಿಸನಳ್ಳಿ,ಪಿಎಸ್ ಐ ಕೆ ರಂಗಯ್ಯ,ಅಪರಾಧ ವಿಭಾಗದ ಪಿಎಸ್ಐ ಗಂಗಾಧರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು