ಬಳ್ಳಾರಿ: ಮಹಿಳೆಯರಿಗೆ ಆಟೋ ಡೈವಿಂಗ್: ಉದ್ಘಾಟನಾ ಸಮಾರಂಭ
ಬಳ್ಳಾರಿ 04: ಡಾನ್ ಬಾಸ್ಕೋ ಸಂಸ್ಥೆಯ ತರುಣಿ ಮಹಿಳಾ ಅಭಿವೃದ್ಧಿ ಸಂಸ್ಥೆ ಮತ್ತು ಬರೋಡೆ ವಿದ್ಯಾ ಪೀಠ ಎಡ್ಯುಕೇಷನ್ ವುಮೆನ್ ಅಯಡ್ ಚೈಲ್ಢ್ ಟ್ರಸ್ಟ್ ರವರ ಸಹಯೋಗದೊಂದಿಗೆ ಮಹಿಳೆಯರಿಗೆ ಆಟೋ ಡೈವಿಂಗ್ ಉಧ್ಘಾಟನೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಡಾನ್ ಬಾಸ್ಕೋ ಶಾಲೆಯ ಮಖ್ಯ ಗುರುಗಳಾದ ಫಾದರ್ ಜೂಡ್ ಆನಂದ್, ಬಾಗ್ಯಲಕ್ಷ್ಮಿ ಬರೋಡೆ, ಕಾಮರ್ಿಕ ಇಲಾಖೆಯ ಪರಶುರಾಂರವರು, ಕರ್ನಾಟಕ ರಕ್ಷಣ ವೇದಿಕೆ ಆಟೋಚಾಲಕರ ಸಂಘದ ಅಧ್ಯಕ್ಷ ಹುಲಿಗಪ್ಪ, ತರುಣಿ ಮಹಿಳಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಹನುಮಂತಮ್ಮ, ಸಲಹೆಗಾರ ಸೈಯದ್ ಹೈದರ್ ಮತ್ತು ಸಿಸ್ಟರ್ ಸೀಮಾ, ಟಿ.ಡಿ.ಹೆಚ್ ಸಂಯೋಜಕಿ ಸವಿತ್ರಿ ಮತ್ತಿತರರು ಸೇರಿ ಆಟೋಚಾಲನೆ ಮಾಡುವ ಹಾಗು ದೀಪ ಬೆಳಗಿ ಉದ್ಘಾಟಿಸಿದರು.
ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಬರೋಡೆ ವಿದ್ಯಾ ಪೀಠ ಎಡ್ಯುಕೇಷನ್ ವುಮೆನ್ ಅಯಡ್ ಚೈಲ್ಢ್ ಟ್ರಸ್ಟ್ನ ಬಾಗ್ಯಲಕ್ಷ್ಮಿ ಬರೋಡೆ ಮಾತನಾಡುತ್ತಾ ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಮಹಿಳಾ ಆಟೋಚಾಲಕರ ತರಬೇತಿಯನ್ನು ಪ್ರಾರಂಬಿಸಿರುವುದು, ಇದು ಕುಟುಂಬದ ಸದಸ್ಯರಿಗೆ ಆಥರ್ಿಕವಾಗಿ ನೆರವಾಗಲು ಸಹಾಯವಾಗುತ್ತದೆ. ಡಾನ್ ಬಾಸ್ಕೋ ಸಂಸ್ಥೆಯು ಯಾವುದೇ ಒಂದು ಹೊಸಕಾರ್ಯಕ್ಕೆ ನೆರವುಕೇಳಿದರು ಮಹಿಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿ ನೆರವಾಗುತ್ತಿದೆ. ಬರೋಡೆ ಟ್ರಸ್ಟಿನಿಂದ ಮೊದಲ ಸಾರಿಗೆ ಪ್ರಾರಂಭ ಮಾಡುತ್ತಿರುವ ಈ ಚಿಕ್ಕ ಪರಿಶ್ರಮ ಫಲಭರಿತವಾರಲು ಎಲ್ಲರ ಸಹಕಾರ ಕೋರುತ್ತಾ ಮಹಿಳಾ ಆಟೋ ಡೈವಿಂಗ್ ಕಲಿಯುವವರಿಗೆ ಶುಭಕೋರಿದರು.
ಕಾಮರ್ಿಕ ಇಲಾಖೆಯ ಪರಶುರಾಮ ಮಾತನಾಡಿ ಅನೇಕ ತರಹದ ಯೋಜನೆಗಳು ಸಕರ್ಾರದ ವತಿಯಿಂದ ಕಾಮರ್ಿಕರಿಗೆ ನೀಡಲಾಗುತ್ತಿದೆ. ಮುಖ್ಯವಾಗಿ ಕಟ್ಟಡ ಕಾಮರ್ಿಕರಿಗೆ ವಿಮೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ವಿಮೆ ಮೊದಲಾದ ಅನುಕೂಲಗಳಿವೆ, ಹಾಗೆ ಇತರ ಖಾಸಗಿ ವಾಹನಗಳಿಗೆ ಮುಂದಿನದಿನಗಳಲ್ಲಿ ವಿಮೆ ಬರ ಬಹುದು ಅವುಗಳನ್ನು ಪಡೆದು ತಮ್ಮ ಕೆಲಸ ಕಾರ್ಯಗಳನ್ನು ಸುಲಭವಾಗಿ ಕೈಗೊಳ್ಳ ಬಹುದೆಂದು ತಿಳಿಸಿದರು.
ಸಿಸ್ಟರ್ ಸೀಮಾ, ಮಾತನಾಡುತ್ತಾ 'ಕಾಯಕವೇ ಕೈಲಾಸ" ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ತಾನು ಮಾಡುವ ಕೆಲಸವನ್ನು ಪ್ರೀತಿಯಿಂದ ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ಅದರಲ್ಲಿ ಅವನು ತೃಪ್ತಿಪಯುತ್ತಾನೆ ಮತ್ತು ತನ್ನ ಕುಟುಂಬ ಜೀವನ ಸಹ ಸುಗಮವಾಗಿ ನಡೆಯುತ್ತದೆ. ಉದಹರಣೆ ಹೇಳುತ್ತಾ ವಿದೇಶಗಳಲ್ಲಿ ಎಷ್ಟೆ ಉತ್ತಮ ಕೆಲಸದಲ್ಲಿರುವವರೂ ಸಹಾ ತಮ್ಮ ಕೆಲಸದ ಸಮಯದ ನಂತರ ಹೋಟೆಲ್ಗಳಲ್ಲಿ ಪಾತೆತೊಳೆಯುವ, ಕೋಣೆಗಳನ್ನು ಶುಚಿಮಾಡುವ ಕೆಲಸ ಸಹಮಾಡುತ್ತಾರೆ, ಆದರೆ ಯಾರೂ ಸಹ ಯಾವಕೆ ಕೆಸವನ್ನೂ ಕೀಳಾಗಿಕಾಣುವುದಿಲ್ಲ. ಹಾಗೆಯೇ ಜೀವನದಲ್ಲಿ ಸ್ವಾವಲಂಬಿಗಳಾಗಿ ಬಾಳ ಬೇಕು, ಮತ್ತು ಇತರರಿಗೆ ನೆರವಾಗುವವರಾಗಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಡಾನ್ ಬಾಸ್ಕೋ ಸಂಸ್ಥೆಯ ತಾಂತ್ರಿಕ ವಿಭಾಗದ ಯುವಕ ಯುವತಿಯರು ಸ್ವ ಸಹಾಯ ಸಂಘದ ಸದಸ್ಯರು ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರಯ ಪಾಲ್ಘೋಂಡರು, ಮತ್ತು ನಿರೂಪಣೆಯನ್ನು ಶಶಿಕಲಾ, ಪ್ರಾರ್ಥನೆಯನ್ನು ಸರಸ್ವತಿ, ಸ್ವಾಗತವನ್ನು ಕುಮಾರಿ. ಭಾಗ್ಯ, ವಂದನಾರ್ಪಣೆಯನ್ನು ಕೊಟ್ರಮ್ಮರವರು ನಡೆಸಿಕೊಟ್ಟರು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.