ಬಳ್ಳಾರಿ: ಸೌಲಭ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಯಶಸ್ವಿ ಹೋರಾಟ
ಲೋಕದರ್ಶನ ವರದಿ
ಬಳ್ಳಾರಿ 03: ಕೋಳೂರು ಗ್ರಾಮದಲ್ಲಿ ಶುಕ್ರವಾರ ನೂರಾರು ಗ್ರಾಮಸ್ತರು ಎಐಡಿವೈಓ, ಆರ್ಕೆಎಸ್, ಹಾಗೂ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ ಸಮರ್ಪಕ ಕುಡಿಯುವ ನೀರು ಮತ್ತು ಸ್ವಚ್ಛತೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಎಐಡಿವೈಓನ ಬಳ್ಳಾರಿ ಜಿಲ್ಲಾ ಸಮಿತಿಯ ಸದಸ್ಯರಾದ ಪಂಪಾಪತಿ ಮಾತನಾಡಿದರು.
ಆರ್.ಕೆ.ಎಸ್.ನ ಜಿಲ್ಲಾ ಕಾರ್ಯದಶರ್ಿಗಳಾದ ಈ.ಹನುಮಂತಪ್ಪ ಮಾತನಾಡಿದರು. ಎಸ್.ಯು.ಸಿ.ಐ. ಕಮ್ಯುನಿಸ್ಟ್ ಪಕ್ಷದ ಬಳ್ಳಾರಿ ಗ್ರಾಮೀಣ ಸಮಿತಿಯ ಕಾರ್ಯದರ್ಶಿಗಳದ ಕಾಮ್ರೇಡ್ ಎ.ದೇವದಾಸ್ ರವರು ನೆರೆದಿದ್ದ ಗ್ರಾಮಸ್ತರನ್ನು ಉದ್ದೇಶಿಸಿ ಮಾತನಾಡುತ್ತಾ.., "ಕುರುಗೋಡು ತಾಲೂಕಿನ ಕೋಳೂರು ಜನತೆ ಕುಡಿಯುವ ನೀರು ಅವಶ್ಯಕ ಮೂಲತಭೂತ ಸೌಲಭ್ಯಗಳಿಲ್ಲದೇ ಪರದಾಡಬೇಕಾಗಿದೆ. ಕುಡಿಯುವ ನೀರಿನ ಅಭಾವದಿಂದ ದಿನಂಪ್ರತಿ ಜನ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಹೊರ ಚರಂಡಿಗಳನ್ನು ಕಾಲಕಾಲಕ್ಕೆ ಕಸ-ಕಡ್ಡಿ ಹೂಳನ್ನು ತೆಗೆದು ಸ್ವಚ್ಛಗೊಳಿಸುತ್ತಿಲ್ಲ. ಆದ್ದರಿಂದ ಮಲಿನವಾದ ನೀರು ಹೂಳು ತುಂಬಿಕೊಂಡು ದುರ್ನಾಥ ಬೀರುತ್ತವೆ. ಕಾರಣವಾಗಿ ಇಡೀ ಊರಲ್ಲಿ ಅನಾರೋಗ್ಯಕರ ವಾತಾವರಣ ಉಂಟಾಗಿ, ಡೆಂಗ್ಯೂ, ಮಲೇರಿಯಾ ಭೀತಿ ಜನರಲ್ಲಿ ಭಯ ಹುಟ್ಟಿಸಿದೆ. ಇಡೀ ಊರಿನಲ್ಲಿ ಆನಾರೋಗ್ಯದ ವಾತಾವರಣ ಸೃಷ್ಟಿಯಾಗಿದೆ. ಜನತೆಯ ಸಮಸ್ಯೆಗಳ ಪರಿಹಾರಕ್ಕಾಗಿ ಕೂಡಲೇ ಬೇಡಿಕೆಗಳನ್ನು ಪೂರೈಸಲು" ಆಗ್ರಹಪಡಿಸಿದರು. ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಗ್ರಾಮ ಪಂಚಾಯಿತಿಯ ಪಿ.ಡಿ.ಓ ರವರು "ಗ್ರಾಮಸ್ತರು ಮತ್ತು ಪ್ರತಿಭಟನಾಕಾರರೊಂದಿಗೆ ಗ್ರಾಮದಲ್ಲಿ ನಲ್ಲಿಗಳು ಮತ್ತು ಚರಂಡಿಯ ದುರಸ್ತಿಯನ್ನು ಸ್ವತಃ ವೀಕ್ಷಿಸಿ, ಚರಂಡಿಯಲ್ಲಿ ನಿಂತ ನೀರನ್ನು ಹರಿಯುವಂತೆ ಮಾಡಲಾಗುವುದು ಮತ್ತು ಸ್ವಚ್ಛತೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಮತ್ತು ಗ್ರಾಮಸ್ತರ ಬೇಡಿಕೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ" ನೀಡಿದರು.
ಈ ಸಂದರ್ಭದಲ್ಲಿ ಬಸಣ್ಣ, ನಾಗರತ್ನ, ಶಿವಮ್ಮ, ರವಿಚಂದ್ರ, ಶಿವಪ್ಪ, ಲಿಂಗಮ್ಮ, ನಾಗಲಿಂಗ, ಮೂಕಮ್ಮ, ಶೇಕಣ್ಣ, ಮೌಲಮ್ಮ, ಗೌರಮ್ಮ, ಗೋವಿಂದ, ರಂಗಸ್ವಾಮಿ, ರವಿಕಿರಣ್ ಇನ್ನಿತರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.