ಬಳ್ಳಾರಿ

ಬಳ್ಳಾರಿ/ಸಿರುಗುಪ್ಪ: ಜೀವನದ ಜೀವಾಳ ಜಾನಪದ: ಬಸವರಾಜ

ಬಳ್ಳಾರಿ/ಸಿರುಗುಪ್ಪ: ಜೀವನದ ಜೀವಾಳ ಜಾನಪದ: ಬಸವರಾಜ

ಲೋಕದರ್ಶನ ವರದಿ

ಬಳ್ಳಾರಿ/ಸಿರುಗುಪ್ಪ 21: ಜೀವನದ ಜೀವಾಳ ಜಾನಪದ ಏಕೆಂದರೆ ಇದು ಜೀವನದಲ್ಲಿ ಸಂಸಾರದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸುವುದೇ ಜಾನಪದವೆಂದು ಕಜಾಪ ಜಿಲ್ಲಾಧ್ಯಕ್ಷರಾದ ಟಿ.ಹೆಚ್.ಎಂ.ಬಸವರಾಜ ತಿಳಿಸಿದರು. 

ಸಿರುಗುಪ್ಪ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನಲ್ಲಿ ಸಿರುಗುಪ್ಪ ತಾಲ್ಲೂಕು ಕನರ್ಾಟಕ ಜಾನಪದ ಪರಿಷತ್ತು ಹಮ್ಮಿಕೊಂಡ ವಿಶ್ವ ಜಾನಪದ ದಿನಾಚರಣೆಯನ್ನು ಹಲಗೆಯನ್ನು ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 

ವಿವಿಧ ಜಾನಪದ ಸ್ಪರ್ದೇಗಳಲ್ಲಿ ವಿಜೇತರಾದವರಿಗೆ ಸಿರುಗುಪ್ಪ ತಾಲ್ಲೂಕು ತಹಶೀಲ್ದಾರರಾದ ದಯಾನಂದ ಪಾಟೀಲ್ ರವರು ಬಹುಮಾನ ವಿತರಣೆ ಮಾಡಿ ಪ್ರಶಸ್ತಿ ಪತ್ರ ನೀಡಿ ಪ್ರತಿಯೊಬ್ಬ ವಿದ್ಯಾರ್ಥಿಯು ಐದು ಸಸಿಗಳನ್ನು ಶಾಲಾ ಆವರಣದಲ್ಲಿ ನೆಡುವುದರ ಮೂಲಕ ವಿಶ್ವ ಜಾನಪದ ದಿನಾಚರಣೆಯನ್ನು ಆಚರಿಸಬೇಕೆಂದು ಕರೆ ಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ ಬಿ.ಬಸವರಾಜ ರವರು ಪ್ರತಿ ಶನಿವಾರ ಬೆಳಿಗ್ಗೆ 11.00 ಗಂಟೆಗೆ ನಮ್ಮ ಶಾಲೆಯಲ್ಲಿ ಜಾನಪದ ಗೀತೆಗಳನ್ನು ಮತ್ತು ನೃತ್ಯಗಳನ್ನು ಏರ್ಪಾಟು ಮಾಡಬೇಕೆಂದು ಸಂಬಂಧಪಟ್ಟವರಿಗೆ ತಿಳಿಸಿದರು.

ತಾಲ್ಲೂಕು ಕಜಾಪ ಕಾರ್ಯದರ್ಶಿ  ಕೆ.ಎಂ.ಚಂದ್ರಕಾಂತ  ಸ್ವಾಗತಿಸಿದರು. ಗಂಗಾಧರ ನಿರೂಪಿಸಿದರು. ತಾಲ್ಲೂಕು ಕಜಾಪ ಅಧ್ಯಕ್ಷ ಡಾ.ಆರ್. ಚೇತನ್ಕುಮಾರ್ ರವರು ವಂದಿಸಿದರು. ವೇದಿಕೆಯ ಮೇಲೆ ಕೃಷ್ಣಪ್ಪ, ಸಿರುಗುಪ್ಪ ತಾಲ್ಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾದ ರಮೇಶ್ ಉಪ್ಪಾರ್ ಮತ್ತು ಡಾ.ಎಸ್.ಮಹೇಶ್ವರಿ ಇವರು ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲಾ ವಿದ್ಯಾಥರ್ಿ/ವಿದ್ಯಾರ್ಥಿನಿಯರಿಗೆ ಜಿಲ್ಲಾ ಘಟಕದ ವತಿಯಿಂದ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.


ಸುದ್ದಿ ಓದಿ