ಬಳ್ಳಾರಿ

ಬಳ್ಳಾರಿ/ಹರಪನಹಳ್ಳಿ: 'ಗಮಕ ಕಲಾನಿಧಿ ಪ್ರಶಸ್ತಿ ಪ್ರದಾನ

ಬಳ್ಳಾರಿ/ಹರಪನಹಳ್ಳಿ: 'ಗಮಕ ಕಲಾನಿಧಿ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

ಬಳ್ಳಾರಿ/ಹರಪನಹಳ್ಳಿ 30: ಕನರ್ಾಟಕ ಗಮಕ ಕಲಾ ಪರಿಷತ್ತಿನ ರಾಜ್ಯಾಧ್ಯಕ್ಷೆ ಗಂಗಮ್ಮ ಕೇಶವಮೂರ್ತಿಗೆ "ಗಮಕ ಕಲಾನಿಧಿ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ನಮ್ಮ ನಿಮ್ಮೆಲ್ಲರ ಹೆಮ್ಮೆಯ ವಿಷಯವೆಂದು ಕನರ್ಾಟಕ ಜಾನಪದ ಪರಿಷತ್ತಿನ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ ಜಿಲ್ಲೆಯ ಹರಪನಹಳ್ಳಿಯ ಗುರುಮಧ್ವ ಮಂದಿರದಲ್ಲಿ ನಡೆದ ಪರಿಮಳ ಭಜನಾ ಮಂಡಳಿ, ಹರಪನಹಳ್ಳಿ ಕರ್ನಾಟಕ ಜಾನಪದ ಪರಿಷತ್ತು, ತಾಲ್ಲೂಕು ಘಟಕ, ಮತ್ತು ಜಿಲ್ಲಾ ಘಟಕ, ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಗಮಕ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಗಮಕ ಎಂಬುದು ಸಾವಿಲ್ಲದ ಸಾಂಸ್ಕೃತಿಕ ಪಳೆಯುಳಿಕೆ ಹಾಗೂ ಜಾನಪದದ ಬಳುವಳಿಯಾಗಿ ಬಂದ ಕಲೆ ಎಂದು ತಿಳಿಸಿದರು. ರಾಮಾಯಣ, ಮಹಾಭಾರತ ಅನೇಕ ಪ್ರಸಂಗಗಳನ್ನು ಚುಟುಕಾಗಿ ವಾಚಿಸಿ ಅದರ ಅರ್ಥವನ್ನು ಎಳೆಎಳೆಯಾಗಿ ಬಿಡಿಸಿ ಹೇಳುವುದೇ ಗಮಕ ಎಂದು ತಿಳಿಸಿದರು. ಜಿಡ್ಡುಗಟ್ಟಿದ ದೇಹಕ್ಕೆ ಚೈತನ್ಯವನ್ನು ಕೊಡುವ ಶಕ್ತಿ ಗಮಕಕ್ಕೆ ಇದೆ ಎಂದು ತಿಳಿಸುತ್ತಾ ಇಂದಿನ ದಿನಮಾನಗಳಲ್ಲಿ ಯುವಕ ಮತ್ತು ಯುವತಿಯರು ಗಮಕ ವಾಚಿಸುವುದನ್ನು ಕಲಿಯಬೇಕೆಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ದಾವಣೆಗೆರೆ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಹರಿಹರದ ಸುಜಾತ ಗೋಪಿನಾಥ ಇವರು ಹರಪನಹಳ್ಳಿಯಲ್ಲಿ ಶಾಲೆಯನ್ನು ತೆಗೆದು ಇಲ್ಲಿಯ ವಿದ್ಯಾಥರ್ಿಗಳಿಗೆ ಗಮಕವನ್ನು ಹೇಳಿಕೊಡುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿದರು. ಕನರ್ಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರಾದ ಅಜರ್ುನ ಪರಸಪ್ಪನವರು ಮಾತನಾಡಿ ಇನ್ನು ಮುಂದೆ ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಯಾರೇ ಮಾಡಿದರು ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಟಿ.ವೆಂಕೋಬರಾವ್ ಮಾತನಾಡಿ ಗಮಕವನ್ನು ಕೇಳುವುದರಿಂದ ನಮ್ಮಲ್ಲಿರುವ ರೋಗಗಳು ವಾಸಿಯಾಗುತ್ತವೆ ಹಾಗೂ ಅದರ ಸಂಗೀತವನ್ನು ಆಲಿಸುವುದರಿಂದ ನಾವು ಹೆಚ್ಚು ಹೆಚ್ಚು ಕ್ರಿಯಾಶೀಲರಾಗುತ್ತೇವೆಂದು ತಿಳಿಸಿದರು. 

ಗಮಕ ಸಿಂಚನ ಕಾರ್ಯಕ್ರಮವನ್ನು ಸ್ಥಳೀಯ ಕಲಾವಿದರಾದ ಶೋಭಾಕಟ್ಟಿ, ಗೀತಾ ರಾಯಸಂ ಹಾಗೂ ಛಾಯಕಟ್ಟಿಯವರು ನಡೆಸಿಕೊಟ್ಟರು. ನಂತರ ಗಮಕ ಸಂಭ್ರಮವನ್ನು ಕನರ್ಾಟಕ ಗಮಕ ಕಲಾ ಪರಿಷತ್ತಿನ ರಾಜ್ಯಾಧ್ಯಕ್ಷೆ ಗಂಗಮ್ಮ ಕೇಶವಮೂತರ್ಿ, ಬೆಂಗಳೂರಿನ ಗಮಕಿಗಳಾದ ಗೀತಾ ಪ್ರಭಾಕರ್ ಹಾಗೂ ದಾವಣೆಗೆರೆ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷೆ ಹರಿಹರದ ಸುಜಾತ ಗೋಪಿನಾಥ ನಡೆಸಿಕೊಟ್ಟರು. ಸ್ವಾಗತವನ್ನು ಹನುಮಂತರಾವ್ ಮಾಡಿದರೆ ನಿರೂಪಣೆಯನ್ನು ಪರಿಮಳ ಭಜನಾ ಮಂಡಳಿಯ ಸದಸ್ಯರು ನೆರವೇರಿಸಿ ವಂದನಾರ್ಪಣೆಯನ್ನು ಪರಿಮಳ ಭಜನಾ ಮಂಡಳಿಯ ಅಧ್ಯಕ್ಷೆ ಶೋಭಾಕಟ್ಟಿ ಮಾಡಿದರು. ನಂತರ ಸರ್ವರಿಗೂ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು. 

ಸಭೆಯಲ್ಲಿ ಪರಿಮಳ ಭಜನಾ ಮಂಡಳಿಯ ಎಲ್ಲಾ ಸದಸ್ಯರು ಕನರ್ಾಟಕ ಜಾನಪದ ಪರಿಷತ್ತಿನ ಹರಪನಹಳ್ಳಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಲಕ್ಷ್ಮೀಶ ಕಲಾ ಸಂಘ ಹರಿಹರದ ಸದಸ್ಯರು ಸಭಿಕರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ವೇದಿಕೆಯ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ನಿವೃತ್ತ ಆಡಳಿತಾಧಿಕಾರಿಗಳಾದ ಎನ್.ಸುಬ್ರಮಣ್ಯ, ಶಿಕಾರಿ ಬಾಲಪ್ಪ, ಗುರುಮಧ್ವ ಸೇವಾಸಮಿತಿಯ ಅಧ್ಯಕ್ಷ ಟಿ.ವ್ಯಾಸರಾಜ್, ಶೋಭಕಟ್ಟಿ, ಟಿ.ವೆಂಕೋಬರಾವ್, ಅರ್ಜುನ್ ಪರಸಪ್ಪ, ಗಂಗಮ್ಮ ಕೇಶವಮೂತರ್ಿ, ಗೀತಾ ಪ್ರಭಾಕರ್, ಸುಜಾತ ಗೋಪಿನಾಥ ಮುಂತಾದವರು ಉಪಸ್ಥಿತರಿದ್ದರು.


ಸುದ್ದಿ ಓದಿ