ಕುಷ್ಟಗಿ

ಬೇಡ ಜಂಗಮ ಅನುಸೂಚಿತ ಜಾತಿ ಪ್ರಮಾಣ ಪತ್ರದ ಕುರಿತು ಬೆಂಬಲ ಸೂಚಿಸುವಂತೆ ಒತ್ತಾಯಿಸಿ ಶಾಸಕರಿಗೆ ಮನವಿ

ಬೇಡ ಜಂಗಮ ಅನುಸೂಚಿತ ಜಾತಿ ಪ್ರಮಾಣ ಪತ್ರದ ಕುರಿತು ಬೆಂಬಲ ಸೂಚಿಸುವಂತೆ ಒತ್ತಾಯಿಸಿ ಶಾಸಕರಿಗೆ ಮನವಿ

ಲೋಕದರ್ಶನ ವರದಿ  

ಕುಷ್ಟಗಿ 12: ಸತ್ಯಪ್ರತಿಪಾದನಾ ಸತ್ಯಾಗ್ರಹಕ್ಕೆ ಹಾಗೂ ಬೇಡ ಜಂಗಮ ಅನುಸೂಚಿತ ಜಾತಿ ಪ್ರಮಾಣ ಪತ್ರದ ಕುರಿತು ಬೆಂಗಳೂರಿನಲ್ಲಿ ನಡೆಯುತ್ತಿರು ಅಧಿವೇಶನದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಬೆಂಬಲ ಸೂಚಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಕುಷ್ಟಗಿ ತಾಲೂಕು ಘಟಕದ ವತಿಯಿಂದ ಸೋಮವಾರ ಬೆಳಗ್ಗೆ ಇಲ್ಲಿನ ಶಾಸಕರ ನಿವಾಸದಲ್ಲಿ ಶಾಸಕರು ಪುತ್ರ ಹಾಗೂ ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪೂರ ಅವರಿಗೆ ಮನವಿ ಪತ್ರ ಸಲ್ಲಿಸಿದರು.  

ನಾಡಿನ ವಿವಿಧ ಹರ-ಗುರು-ಚರ ಮೂರ್ತಿಗಳ ಸಾನಿಧ್ಯದಲ್ಲಿ ಬೆಂಗಳೂರಿನಲ್ಲಿ ಕಾನೂನು ಬದ್ಧವಾಗಿ ಬೇಡಜಂಗಮ ಅನುಸೂಚಿತ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಧರಣಿ ಸತ್ಯಾಗ್ರಹಕ್ಕೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಬೆಂಬಲ ಸೂಚಿಸಬೇಕು.  

ವಿಧಾನಸಭೆ ಅಧಿವೇಶನದಲ್ಲಿ ಬೇಡಜಂಗಮ ಅನುಸೂಚಿತ ಜಾತಿ ಪ್ರಮಾಣ ಪತ್ರದ ಕುರಿತು ಧ್ವನಿಯತ್ತಿ ಬೇಡ ಜಂಗಮರ ಹಕ್ಕುಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಶಾಸಕರನ್ನು ಒತ್ತಾಯಿಸಿದ್ದಾರೆ.  

ಈ ಸಂದರ್ಭದಲ್ಲಿ  ಬೇಡಜಂಗಮ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ ಗಂಧದಮಠ,ಗುರುಮೂರ್ತಯ್ಯ ತಾವರಗೇರ, ಮಂಜುನಾಥ ಛಪ್ಪನ್ನಮಠ, ಅಮರೇಶ ಅರಳೆಲಿಮಠ, ಈಶ್ವರ ಬಾಗಲವಾಡಮಠ, ಮಹಾಂತೇಶ ಹಿರೇಮಠ, ಬಸವರಾಜ ಕೆ ಹಿರೇಮಠ, ಪತ್ರಕರ್ತ ಸಂಗಮೇಶ ಲೂತಿಮಠ, ಪ್ರಶಾಂತ ಹಿರೇಮಠ, ಪ್ರತಾಪ ಹಿರೇಮಠ, ಮುತ್ತಣ್ಣ ಹಿರೇಮಠ ಮತ್ತು ಕುಷ್ಟಗಿ ತಾಲೂಕು ಬೇಡ ಜಂಗಮ ಸಮಾಜದ ಮುಖಂಡರು ಹಾಜರಿದ್ದರು. 


ಸುದ್ದಿ ಓದಿ