ಕಾಗವಾಡ

ಕಳಪೆ ಕಾಮಗಾರಿ ಆಗದಂತೆ ಎಚ್ಚರಿಕೆ ವಹಿಸಿ: ಶಾಸಕ ರಾಜು ಕಾಗೆ ಸೂಚನೆ.

ಕಳಪೆ ಕಾಮಗಾರಿ ಆಗದಂತೆ ಎಚ್ಚರಿಕೆ ವಹಿಸಿ: ಶಾಸಕ ರಾಜು ಕಾಗೆ ಸೂಚನೆ.

ಕಾಗವಾಡ,03: ಹಳ್ಳಿಗಳು ಅಭಿವೃದ್ಧಿ ಹೊಂದಿದರೇ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ನಮ್ಮ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಯ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಅನಿದಾನ ಸರ್ಕಾರದಿಂದ ತರಲಾಗಿದ್ದು, ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕು. ಜೊತೆಗೆ ಸಾರ್ವಜಕರೂ ಸಹ ಕಾಮಗಾರಿ ಕಳಪೆಯಾಗದಂತೆ ನಿಗಾ ವಹಿಸಬೇಕೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ. 

ಅವರು, ಮಂಗಳವಾರ ಸೆ.03 ರಂದು ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದಲ್ಲಿ 30 ಕೋಟಿ ರೂಪಾಯಿ ವೆಚ್ಚದ ಕಾಗವಾಡ-ಉಪ್ಪಾರವಾಡಿಯಿಂದ ಉಗಾರ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. ಸಾರ್ವಜನಿಕರು ಕಾಮಗಾರಿಯ ಗುಣಮಟ್ಟದಲ್ಲಿ ಕಳಪೆ ಕಾಮಗಾರಿ ಕಂಡುಬಂದರೇ ತಕ್ಷಣವೇ ಕಾಮಗಾರಿ ಬಂದ್ ಮಾಡಿ, ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ನನ್ನ ಗಮನಕ್ಕೆ ತನ್ನಿ ಇದು ಕೇವಲ ಶಾಸಕರು ಕೆಲಸವಲ್ಲ. ಇದು ಪ್ರತಿಯೊಬ್ಬ ಸಾರ್ವಜನಿಕರ ಕರ್ತವ್ಯವಾಗಿದೆ. ಏಕೆಂದರೆ ಸಾರ್ವಜನಿಕರು ಕಟ್ಟಿದ ತೆರಿಗೆ ಹಣದಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತವೆ. ಆದ್ದರಿಂದ ಸಾರ್ವಜನಿರು ಸಹ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳು ಕಳಪೆ ಆಗದಂತೆ ನೋಡಿಕೊಳ್ಳಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಸಾಕಷ್ಟು ಅನುದಾನ ತರಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ತಂದು. ಮತಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ  ಮಾಡಲಾಗುವುದು ಎಂದರು.  

ಕಾರ್ಯಕ್ರಮದಲ್ಲಿ ಆಗಮಿಸಿದ್ದ ಎಲ್ಲ ಗಣ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ವಿನೋದ ಬರಗಲೆ, ರಾಹುಲ ಶಹಾ, ರಾಹುಲ ಕಟಗೇರಿ, ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ಸುಧೀರ ಕರವ. ವೀರಭದ್ರ ಕಟಗೇರಿ, ಚಿದಾನಂದ ಅವಟಿ, ಶೀತಲ ಹೇರ್ಲೆಕರ, ರಮೇಶ ರತ್ನಪ್ಪಗೋಳ, ಪ್ರಕಾಶ ಮಾಳಿ, ನಜೀರ ಮುಲ್ಲಾ, ಅನೀಲ ಢಾಲೆ, ಬಾಳಾಸಾಬ ಜಿರಗಾಳೆ, ಗುತ್ತಿಗೆದಾರರಾದ ಸಹ್ಯಾದ್ರಿ ಕನ್ಸಟ್ರೇಕ್ಸ್‌ನ ಸಾಗರ ಸಗರೆ, ಲೋಕೋಪಯೋಗಿ ಇಲಾಖೆಯ ಎಇಇ ಜಯಾನಂದ ಹಿರೇಮಠ, ಮಲ್ಲಿಕಾರ್ಜುನ ಮಗದುಮ್ಮ ಸೇರಿದಂತೆ ಕಾಗವಾಡ, ಶೇಡಬಾಳ, ಉಗಾರ ಪಟ್ಟಣದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ