ಬಿಕಾಂ ಪರೀಕ್ಷೆ: ಶಿರಗುಪ್ಪಿ ಕೆಎಲ್ಇ ಉತ್ತಮ ಫಲಿತಾಂಶ
ಶೇಡಬಾಳ 30: ಸಮಿಪದ ಶಿರಗುಪ್ಪಿ ಗ್ರಾಮದಲ್ಲಿರುವ ಕೆ ಎಲ್ ಇ ಸಂಸ್ಥೆಯ ಪದವಿ ವಾಣಿಜ್ಯ ಮಹಾವಿದ್ಯಾಲಯದ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಯನಿರು 100 ಕ್ಕೆ 100 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯವು ಕಳೆದ ಸಪ್ಟೆಂಬರ 2021 ರಲ್ಲಿ ನಡೆಸಿದ 6 ನೇ ಸಮಿಸ್ಟರ ಪರಿಕ್ಷೆಗಳಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಕುಮಾರಿ ಪ್ರತಿಕ್ಷಾ ಮಡಿವಾಳ, ಕುಮಾರಿ ನಿಖಿತಾ ಮಗದುಮ, ಕುಮಾರಿ ಮುಸ್ಕಾನ ನಧಾಫ, ಕುಮಾರಿ ಶೃತಿ ಝುಂಜರವಾಡ, ಇವರು ಜಿಎಸ್ಟಿ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ, ಮತ್ತು ಕಾಸ್ಟಿಂಗ ವಿಷಯದಲ್ಲಿ ಪ್ರಗತಿ ಮಗದುಮ್ ಮತ್ತು ಪ್ರತಿಕ್ಷಾ ಮಡಿವಾಳ 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಇನಕಮ್ ಟ್ಯಾಕ್ಷ ವಿಷಯದಲ್ಲಿ ಪ್ರತಿಕ್ಷಾ ಮಡಿವಾಳ 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾಳೆ. ಈ ವಿಷಯವನ್ನು ಪ್ರೋ : ಎಮ್. ಎಮ್. ಜೋಶಿ, ಪ್ರೋ : ಎಮ್ ಕೆ ಪಾಟೀಲ, ಪ್ರೋ : ಎಲ್. ಎಸ್. ವಂಟಮುರೆ ಭೋದನೆ ಮಾಡಿದ್ದರು. ವಿದ್ಯಾರ್ಥಿನಿಯರ ಈ ಸಾಧನೆಯನ್ನು ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರಾದ ಪ್ರೋ : ಶಿವಾನಂದ ಪಾಟೀಲ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.