ಬಸವೇಶ್ವರ ನೀರಾವರಿ ಯೋಜನೆ ಕಾಮಗಾರಿ ವೀಕ್ಷಣೆ
ಕಾಗವಾಡ 25: 1286 ನೂರು ಕೋಟಿ ರೂ. ವೆಚ್ಚದ ಬಸವೇಶ್ವರ ಏತ ನೀರಾವರಿ ಯೋಜನೆಗೆ ಬರುವ ಜೂನ್ 20 ರಂದು ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದೆಂದು ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಸೋಮವಾರ ಐನಾಪುರದಲ್ಲಿ ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ವೀಕ್ಷಿಸಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು.
ಕಾಗವಾಡ ತಾಲೂಕಿನ ಪೂರ್ವಭಾಗದ 70 ಸಾವಿರ ಎಕರ ಕ್ಷೇತ್ರದಲ್ಲಿ ನೀರಾವರಿ ಯೋಜನೆ ರೂಪಿಸಿ ಅನೇಕ ರೈತರ ಕೈಗೆ ಕೆಲಸ ನೀಡುವದೊಂದಿಗೆ ಬರಡಭೂಮಿ ಹಚ್ಚು-ಹಸಿರು ಮಾಡುವ ಗುರಿಯಾಗಿದೆ. ಕಳೇದ ಅನೇಕ ವರ್ಷಗಳಿಂದ ಈ ಯೋಜನೆ ರೂಪಿಸಲು ಅನೇಕರು ಪ್ರಯತ್ನಿಸಿದರು. ಆದರೆ, ಈ ಭಾಗದಲ್ಲಿ ನೀರು ಹರಿಸಿ ಜನರ ಬೇಡಿಕೆ ಈಡೆಯರಿಸುವ ನಂದು ಒಂದು ಗುರಿಯಾಗಿತ್ತು. ಇದನ್ನು ಈ ರೂಪದಲ್ಲಿ ಪ್ರಯತ್ನಿಸುತ್ತಿದ್ದೇನೆಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಕೃಷ್ಣಾ ನದಿಯಿಂದ 4 ಟಿಎಂಸಿ ನೀರು ಯೋಜನೆ ಮುಖಾಂತರ ಹರಿಸಿ ಕಾಗವಾಡ ಕ್ಷೇತ್ರದ ಮದಬಾವಿ, ಬೊಮ್ನಾಳ, ಜಂಬಗಿ, ಹಣಮಾಪುರ, ಮಸರಗುಪ್ಪಿ, ಇಂಗಳಗಾಂವ, ಅರಳಿಹಟ್ಟಿ, ಕಲುತಿ, ಸಂಬರಗಿ, ಶಿವನೂರ, ಪಾಂಡೆಗಾಂವ, ಖಿಳೆಗಾಂವ, ಅಜೂರ, ಅನಂತಪುರ, ನಾಗನೂರ, ತಾಂವಶಿ, ಕಿರಣಗಿ, ಬೇವನೂರ, ಮಲ್ಹಾಬಾದ್, ಬಳ್ಳಿಗೇರಿ, ಗುಂಡೆವಾಡಿ ಈ ಗ್ರಾಮಗಳಿಗೆ ನೀರು ಹರಿಸಲಾಗುವುದು. ಈ ಯೋಜನೆಯಿಂದ ಈ ಭಾಗದ ಬರಡಭೂಮಿ ಹಚ್ಚು-ಹಸಿರಾಗಲಿದೆಯೆಂದು ಕಾಗವಾಡ ಕ್ಷೇತ್ರ ಶಾಸಕರು ಮತ್ತು ಕೈಮಗ್ಗ ಇಲಾಖೆ ಸಚಿವ ಶ್ರೀಮಂತ ಪಾಟೀಲ ಹೇಳಿದರು. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇವರು ಈ ಯೋಜನೆ ಪೂರ್ಣಗೊಳಿಸಲು ಎಲ್ಲ ರೀತಿ ಸಹಕಾರ ನೀಡುತ್ತಿದ್ದಾರೆ ಎಂದರು.
23 ಕೆರೆಗಳು ನೀರು ತುಂಬಿಸಲು 229.40 ಕೋಟಿ ರೂ.:
ಕಾಗವಾಡ ಕ್ಷೇತ್ರದ ಪೂರ್ವಭಾಗದಲ್ಲಿ 23 ಗ್ರಾಮಗಳ ಕೆರೆ ತುಂಬುವ ಯೋಜನೆ ಕೈಗೊಳ್ಳಲಾಗಿದ್ದು, ಬರುವ ಜುಲೈ 15 ರಿಂದ ಅಕ್ಟೋಬರ್ 15ರ ವರೆಗಿನ 90 ದಿನಗಳಲ್ಲಿ ಈ ಯೋಜನೆ ಚಾಲನೆಗೊಳ್ಳಲಿದ್ದು. 0.258 ಟಿಎಂಸಿ ನೀರು ಈ ಕೆರೆಗಳಲ್ಲಿ ಸಂಗ್ರಹವಾಗಲಿದೆ.
ಸ್ಟೇಜ್ ನಂ. 1ರಲ್ಲಿ ಕಾಗವಾಡ, ಶೇಡಬಾಳ, ಲೋಕುರ, ಮಂಗಸೂಳಿ, ಬೊಮ್ನಾಳ, ಜಂಬಗಿ, ಶಿವನೂರ, ಅನಂತಪುರ, ಗುಂಡೆವಾಡಿ, ಬಾಳಿಗೇರಿ, ಪಾರ್ಥನಹಳ್ಳಿ, ಚಮಕೇರಿ, ಮಲ್ಹಾಬಾದ್, ಬೇವನೂರ, ಕವಲಗುಡ್ಡ, ವಿಷ್ಣುವಾಡಿ, ಅನಂತಪುರ, ಸೇರಿದಂತೆ 23 ಗ್ರಾಮಗಳಲ್ಲಿ ಈ ನೀರು ಹರಿಸಲಾಗುವುದು. ಈ ಯೋಜನೆಗಾಗಿ 229.40 ಕೋಟಿ ರೂ. ವೆಚ್ಚವಾಗಲಿದೆಯೆಂದು ಜಲಸಂಪನ್ಮೂಲ ಇಲಾಖೆಯ ಮುಖ್ಯ ಅಧಿಕ್ಷಕ ಅಭಿಯಂತರಾದ ಬಿ.ಆರ್.ರಾಠೋಡ್, ಮುಖ್ಯ ಅಭಿಯಂತ ಅರವಿಂದ ಕನಗಿಲ್, ಸಚಿವ ರಮೇಶ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ ಇವರಿಗೆ ವಿವರವಾಗಿ ಮಾಹಿತಿ ನೀಡಿದರು.
ಸಚಿವರೊಂದಿಗೆ ಅಥಣಿ ಶಾಸಕ ಹಾಗೂ ಕೊಳಚೆ ನಿರ್ಮೂಲನೆ ನಿಗಮದ ಅಧ್ಯಕ್ಷ ಮಹೇಶ ಕುಮಠಳ್ಳಿ, ಪಕ್ಷದ ಹಿರಿಯರಾದ ಕಿರಣ ಪಾಟೀಲ, ಶೀತಲ ಪಾಟೀಲ, ದಾದಾ ಪಾಟೀಲ, ಅಪಾಸಾಹೇಬ ಅವತಾಡೆ, ನಾನಾಸಾಹೇಬ ಅವತಾಡೆ, ವಿನಾಯಕ ಬಾಗಡಿ, ಎಸ್.ಎಂ.ಮುದಕನ್ನವರ, ತಮ್ಮಣ್ಣ ಪಾರಶೆಟ್ಟಿ, ಸೇರಿದಂತೆ ಅನೇಕರು ಇದ್ದರು.
ನೀರಾವರಿ ಇಲಾಖೆಯ ಮುಖ್ಯ ಅಧಿಕ್ಷಕ ಅಭಿಯಂತರಾದ ಬಿ.ಆರ್.ರಾಠೋಡ್, ಮುಖ್ಯ ಅಭಿಯಂತ ಅರವಿಂದ ಕನಗಿಲ್, ಕೆ.ಕೆ.ಜಾಳಿಬೇರಿ, ಕೆ. ರವಿ, ಸಿ.ಡಿ.ಕಿನಿಂಗೆ, ಪ್ರವೀಣ ಹುನಸಿಕಟ್ಟಿ, ಪ್ರಶಾಂತ ಪೋತದಾರ, ಸಾಗರ ಪವಾರ, ಬಸವರಾಜ ಗಲಗಲಿ, ಸೇರಿದಂತೆ ಅನೇಕರು ಇದ್ದರು.