ರಾಣೆಬೆನ್ನೂರ

ಬಸವೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್100 ವರ್ಷದ ಶತಮಾನೋತ್ಸವ

ಬಸವೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್100 ವರ್ಷದ ಶತಮಾನೋತ್ಸವ

ರಾಣಿಬೆನ್ನೂರು: ಸೆ 22-ನಗರದಲ್ಲಿ 1924ರಲ್ಲಿ ಜನ್ಮತಾಳಿದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕ್ ಇಂದು ಹೆಮ್ಮರವಾಗಿ ಬೆಳೆದಿದ್ದು,100 ವರ್ಷದ ಶತಮಾನೋತ್ಸವದ ಕಾರ್ಯ ಕ್ರಮವನ್ನು ಸೆ.24ರಂದು ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಿ.ಆರ್, ಅಸುಂಡಿ ಹೇಳಿದರು. ನಗರದಲ್ಲಿ  ಬ್ಯಾಂಕಿನ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ 12 ಜನ ಶೇರುದಾರರಿಂದ 1924ರ ಮಾ. 7ರಂದು 5ಸಾವಿರ ರೂ. ಬಂಡವಾಳದಿಂದ ಪ್ರಾರಂಭವಾದ ಬ್ಯಾಂಕ್ ಪ್ರಸ್ತುತ 1.81 ಕೋಟಿ ರೂ ಶೇರು ಬಂಡವಾಳ ಹೊಂದಿದೆ. ಬ್ಯಾಂಕಿನ ಪ್ರಥಮ ಅಧ್ಯಕ್ಷರಾಗಿ ಕೊಟ್ರ ಬಸಪ್ಪ ಬಣಗಾರ ಹಾಗೂ ಕಾರ್ಯದರ್ಶಿಯಾಗಿ ಗೋಮಣಸಾ ಕಾಟವೆ ಕಾರ್ಯ ನಿರ್ವಹಿಸಿದರು. ನಂತರದ ದಿನಗಳಲ್ಲಿ ಕೊಟ್ರಪ್ಪ ಅನಿಶಟ್ರ, ಮಹಾ ಲಿಂಗಪ್ಪ ಅಂಕಲಕೋಟಿ, ಶಂಕ್ರಪ್ಪ ಸೂರಣಗಿ ಅವರ ಅಧ್ಯಕ್ಷತೆ ಹಾಗೂ ದಕ್ಷ ಆಡಳಿತದಿಂದಾಗಿ ಸಾಕಷ್ಟು ಅಭಿವೃದ್ಧಿ ಹೊಂದಿತು. ನಂತರದ ದಿನಗಳಲ್ಲಿ ಅಂದಾನಪ್ಪ ಅಸುಂಡಿ, ಬಸವರಾಜ ಆಲೂರ, ಶಿವಮೂರ್ತಪ್ಪ ಕಟ್ಟಿಮನಿ, ಮಹಾದೇವಪ್ಪ ಗವಳಿ, ಮಹಾಲಿಂಗಪ್ಪ ಬೇತೂರ, ವೀರಣ್ಣ ಜಂಬಗಿ, ಗೂಳಪ್ಪ ನರಸಗೊಂಡರ, ಗಾಯತ್ರಮ್ಮ ಕುರವತ್ತಿ, ಜಯಣ್ಣ ಜಂಬಗಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಇವರ ಪೈಕಿ ಮಹಾದೇವಪ್ಪ ಗವಳಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ಬ್ಯಾಂಕ್ ಸಾಕಷ್ಟು ಪ್ರವರ್ಧಮಾನಕ್ಕೆ ಬಂದಿದ್ದು, ಅದನ್ನು ಬ್ಯಾಂಕಿನ ಸುವರ್ಣಯುಗ ಎನ್ನಬಹುದಾಗಿದೆ ಎಂದರು. 1963 ರಲ್ಲಿ ಬ್ಯಾಂಕ್ ಸ್ವಂತ ಕಟ್ಟಡ ಹೊಂದಿದ್ದು, ನಂತರ 2011 ರಲ್ಲಿ ಕಟ್ಟಡ ನವೀಕೃತಗೊಂಡಿತು. ಪ್ರಸ್ತುತ ಬ್ಯಾಂಕಿನ ವಾರ್ಷಿಕ ವಹಿವಾಟು 843.87 ಕೋಟಿಗೆ ತಲುಪಿದ್ದು 46.34 ಕೋಟಿ ರೂ ಠೇವಣಿ, 39.81 ಕೋಟಿ, ನಿವ್ವಳ ಉತ್ಪಾದಕ ಸಾಲ ಹೊಂದಿದೆ. 1.49 ಕೋಟಿ ಆದಾಯಗಳಿಸಿದ್ದು ಇದಕ್ಕೆ ಸಾರ್ವಜನಿಕರು, ಸದಸ್ಯರು ಪ್ರಮುಖ ಕಾರಣವಾಗಿದ್ದು ಸಿಬ್ಬಂದಿಯ ಪರಿಶ್ರಮ ಅಪಾರ ಎಂದು ವಿವರಿಸಿದರು. ಬ್ಯಾಂಕಿನ ನಿರ್ದೇಶಕರಾದ ಶಿವಾನಂದ ಸಾಲಗೇರಿ, ಮಂಜುನಾಥ ಓಲೇಕಾರ, ಚೋಳಪ್ಪ ಕಸವಾಳ, ಪರಮೇಶಪ್ಪಗವಳಿ, ಶಂಭುಲಿಂಗಪ್ಪ ಕಟಗಿಹಳ್ಳಿ, ಬಸವರಾಜ ತಾವರಗೊಂದಿ, ಬಸವಣ್ಣೆಪ್ಪ ಬಳ್ಳಾರಿ, ಸರೋಜಾ ಅಜ್ಜೇವಡಿಮಠ ಮೊದಲಾದವರಿದ್ದರು 

ಸುದ್ದಿ ಓದಿ