ಇಂಡಿ

ವಿದ್ಯಾರ್ಥಿನಿ ಸಮೃದ್ಧಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ

ವಿದ್ಯಾರ್ಥಿನಿ ಸಮೃದ್ಧಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ
ಇಂಡಿ: ವಿದ್ಯಾರ್ಥಿನಿ ಸಮೃದ್ಧಿ ತೋಳನೂರಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇಂಡಿ26: ಪಟ್ಟಣದ ಸಮೃಧ್ಧಿ ತೋಳನೂರ ವಿದ್ಯಾರ್ಥಿನಿಗೆ ಇತ್ತೀಚೆಗೆ ದೇವರ ಹಿಪ್ಪರಗಿ ತಾಲ್ಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಬಸವಶ್ರೀ ಫೌಂಡೇಶನ್ ಹಾಗೂ ಕರವೇ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

ವಿದ್ಯಾರ್ಥಿನಿ ಸಮೃಧ್ಧಿ ಇಂಡಿ ಪಟ್ಟಣದ ಆರ್‌. ಎಂ ಶಹಾ ಶಾಲೆಯಲ್ಲಿ 4 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ಕಿಡ್ಸ ಬ್ರೇನ್ ಅಕಾಡೆಮಿಯ ಆಶ್ರಯದಲ್ಲಿ ನಡೆದ ವಿಶ್ವಮಟ್ಟದ ಗಣಿತ ಮಗ್ಗಿಗಳನ್ನು ಹೇಳುವ ಸ್ಪರ್ಧೆಯಲ್ಲಿ ಗಣಿತ ವಿಷಯದ 1 ರಿಂದ 34 ಸಂಖ್ಯೆಗಳ ಮಗ್ಗಿಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಹೇಳುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದ ಸಮೃದ್ಧಿಗೆ ಮತ್ತೊಂದು ಗೌರವ ಸಂದಿದೆ. 

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಆಳೂರ ಸಿದ್ದಾರೂಢ ಮಠದ ಶಂಕರಾನಂದ ಸ್ವಾಮೀಜಿ, ಸಿಂದಗಿ ಶಾಸಕ ರಮೇಶ ಭೂಸನೂರ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಾನಾಗೌಡ ಬಿರಾದಾರ ಮತ್ತಿತರರು ಬಸವಶ್ರೀ ಪ್ರಶಸ್ತಿ ನೀಡಿ ವಿದ್ಯಾರ್ಥಿನಿಗೆ ಅಭಿನಂದಿಸಿದ್ದಾರೆ. 

ಸುದ್ದಿ ಓದಿ