ಸಹಕಾರಿ ರತ್ನ ಪ್ರಶಸ್ತಿ ಪುರಷ್ಕೃತ ಬಸವರಾಜರಗೆ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ 20: ಹಾವೇರಿಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟವಾಗಲು ಬಸವರಾಜ ಅರಬಗೊಂಡ ಅವರ ಬಹಳಷ್ಟು ಪರಿಶ್ರಮವಿದ್ದು ಸತತ 14 ವರ್ಷಗಳ ಹೋರಾಟ ಮತ್ತು ಸಿಎಂ ಬೊಮ್ಮಾಯಿಯವರ ಮುತುವರ್ಜಿಯಿಂದ ರೈತರ ಬಹಳ ದಿನದ ಕನಸು ನನಸಾಗಿದೆ ಎಂದು ಕೆಎಂಎಫ್ ನಿರ್ದೇಶಕ ಬಸನಗೌಡ ಮೇಲಿನಮನಿ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕಾ ಹಾಲು ಉತ್ಪಾದಕರ ಸಹಕಾರಿ ಸಂಘಗಳು, ಹಾಗೂ ನೌಕರರ ಕ್ಷೇಮಾಭಿವೃದ್ದಿ ಸಂಘ ಶಿಗ್ಗಾವಿ ಇವರ ವತಿಯಿಂದ ಸಹಕಾರಿ ರತ್ನ ಪ್ರಶಸ್ತಿ ಪುರಷ್ಕೃತ ಬಸವರಾಜ ಅರಬಗೊಂಡ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಒಕ್ಕೂಟ ಸದೃಢವಾಗುವ ನಿಟ್ಟಿನಲ್ಲಿ ಶಿಗ್ಗಾವಿಯಲ್ಲಿಯ ಕಚೇರಿಗೆ ಮೂಲಭೂತ ಸೌಲಭ್ಯಕ್ಕೆ ಮುಂದಾಗಬೇಕು ಎಂದರು, ಅರಬಗೊಂಡ ಅವರು ಸಹಕಾರಿ ಸದಸ್ಯರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದಾರೆ ಶಿಗ್ಗಾವಿಯಲ್ಲಿ ವಿಭಾಗೀಯ ಕಚೇರಿ ಅವರಿಗೆ ಪ್ರಶಸ್ತಿ ಬಂದಿರುವುದು ಸ ತಂದಿದೆ ಎಂದ ಅವರು ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯನಿರ್ವಾಹಕರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಹಾಲು ಒಕ್ಕೂಟದ ಆರ್ ಎಸ್ ಹೆಗಡೆ ಮಾತನಾಡಿ ಜಿಲ್ಲೆಯಲ್ಲಿ 657 ಹಳ್ಳಿಗಳಿದ್ದು 413 ಹಾಲು ಉತ್ಪಾದಕರ ಸಹಕಾರಿ ಸಂಘಗಳು ಕಾರ್ಯನಿರ್ವಹೆ ಮಾಡುತ್ತಿವೆ, ಹೊಣೆಗಾರಿಕೆಯಿಂದ ಕೆಲಸ ಮಾಡಿದರೆ ಸಂಘದ ಏಳಿಗೆ ಸಾದ್ಯವಿದೆ ಎಂದರು.
ಎಸ್ ಸಿ ಸೋಮಶೇಖರ ಮಾತನಾಡಿ ಇಂದು ಹಾಲಿನ ಶೇಖರಣೆಗೆ ಒತ್ತು ನೀಡಬೇಕಿದ್ದು ಏಪ್ರಿಲ್ನಿಂದ ಇಲ್ಲಿಯವರೆಗೆ 8 ಹೊಸ ಸಂಘಗಳನ್ನು ನಾವು ತೆರೆದಿದ್ದು ಇನ್ನೂ 20 ಹೊಸ ಸಂಘಗಳನ್ನು ತೆರೆಯುವ ನೀರೀಕ್ಷೇ ಇದೆ, ಹಾಲು ಉತ್ಪಾನೆಯಿಂದ ರೈತರು ಲಾಭದಾಯಕವಾಗಿರಬೇಕು, ರೈತರಿಗೆ ಒಕ್ಕೂಟದಿಂದ ಕೊಡುವ ಯಾವುದೇ ಸೌಲಭ್ಯವನ್ನ ಕಡಿಮೆ ಮಾಡಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಷ್ಕೃತ ಬಸವರಾಜ ಅರಬಗೊಂಡ ಅವರನ್ನ ಸಹಕಾರಿ ಸಂಘದ ಸದಸ್ಯರು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಸಹಕಾರಿ ರತ್ನ ಪ್ರಶಸ್ತಿ ಪುರಷ್ಕೃತ ಬಸವರಾಜ ಅರಬಗೊಂಡ ಮತ್ತು ಜಿಲ್ಲಾ ಯೂನಿಯನ್ ಅದ್ಯಕ್ಷ ಶಿವಾನಂದ ರಾಮಗೇರಿ, ಶಿವಾನಂದ ಮ್ಯಾಗೇರಿ ಮಾತನಾಡಿದರು.
ಧರ್ಮಸ್ಥಳ ಸಂಘದ ಉಮಾ ನಾಗರಾಜ್, ಎಸ್ ಎಸ್ ಹಿರ, ಪರಮೇಶ್ವರ್ಪ, ಪ್ರವೀಣ ಪಾಟೀಲ, ಡಾ. ಮನು, ನರಹರಿ ಕಟ್ಟಿ, ಅಶೋಕ ಬೆಂಗೇರಿ, ಯಲ್ಲಪ್ಪ ಓಲೇಕಾರ, ಅಶೋಕ ಮೇಟಿ ಸೇರಿದಂತೆ ಹಾಲು ಉತ್ಪಾದಕರ ಸಹಕಾರಿ ಸಂಘದ ಶಿಗ್ಗಾವಿ ಮತ್ತು ಸವಣೂರ ತಾಲೂಕಿನ ಸದಸ್ಯರು, ಮಹಿಳಾ ಸದಸ್ಯರು ಇದ್ದರು.