ಕಾರ್ಯದರ್ಶಿಯಾಗಿ ಬಸವರಾಜ ಕುಮಸಗಿ ನೇಮಕ
ಇಂಡಿ24: ಪಟ್ಟಣದ ಬಸವರಾಜ ಕುಮಸಗಿ ಇವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಹಾಸಭೆಯ ಅಧ್ಯಕ್ಷ ಶ್ಯಾಮನೂರ ಶಿವಶಂಕರ್ಪನವರು, ರಾಜ್ಯ ಘಟಕದ ಅಧ್ಯಕ್ಷ ಎನ್.ತಿಪ್ಪಣ್ಣ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡೆಯೂರ್ಪ ಮತ್ತಿತರಿದ್ದರು.
ಬಸವರಾಜ ಕುಮಸಗಿಯವರು ಇಂಡಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಮತ್ತು ರಾಣಿ ಚೆನ್ನಮ್ಮ ವಿವಿ ಬಿಈಡಿ ಕಾಲೇಜುಗಳ ಮಹಾಮಂಡಳದ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದು. ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮದಲ್ಲಿರುವದನ್ನು ಗಮನಿಸಿ ನೇಮಕ ಮಾಡಲಾಗಿದೆ.