ಬಸವರಾಜ ಬೊಮ್ಮಾಯಿಯವರ 64 ನೇ ವರ್ಷದ ಹುಟ್ಟು ಹಬ್ಬ: ಸನ್ಮಾನ ಕಾರ್ಯಕ್ರಮ
ಶಿಗ್ಗಾವಿ 29: ಪಟ್ಟಣದ ಹೊರವಲಯದಲ್ಲಿರುವ ಪೀನಿಕ್ಸ ಶಿಕ್ಷಣ ಸಂಸ್ಥೆಏರ್ಪಡಿಸಿದ ಬಸವರಾಜ ಬೊಮ್ಮಾಯಿಯವರ 64 ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಡಾ.ಎಂ.ಎಂ.ತಿರ್ಲಾಪೂರ, ಕಾರ್ಯದರ್ಶಿ ಡಾ.ರಾಣಿ ತಿರ್ಲಾಪೂರ, ಆಡಳಿತ ಮಂಡಳಿ ಸದಸ್ಯರಾದ ಸಿದ್ದಲಿಂಗಪ್ಪ ಪಾಟೀಲ, ಲಕ್ಷ್ಮೀಭಾಯಿ ಕಟ್ಟಿ, ಸುಮಿತ್ರಾ ಪಾಟೀಲ, ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮೀ ಪಾಟೀಲ, ಸೇರಿದಂತೆ ಇತರರು ಉಪಸ್ಥಿತರಿದ್ದರು.