ಶಿಗ್ಗಾವ್

ಹಡಪದ ಸಮಾಜದ ಬೆನ್ನಿಗೆ ನಿಂತ ಏಕೈಕ ಸಿಎಂ ಬಸವರಾಜ ಬೊಮ್ಮಾಯಿ :ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿ

ಹಡಪದ ಸಮಾಜದ ಬೆನ್ನಿಗೆ ನಿಂತ ಏಕೈಕ ಸಿಎಂ ಬಸವರಾಜ ಬೊಮ್ಮಾಯಿ :ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿ

ಲೋಕದರ್ಶನ ವರದಿ 

ಶಿಗ್ಗಾವಿ 07: ತಂಗಡಗಿಯ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಕಾರ್ಯಕ್ರಮಕ್ಕೆ ಬಂದು ಗೌರವದಿಂದ ನಡೆದು, ನುಡಿದಂತೆ ನಡೆದು ಹಡಪದ ಅಭಿವೃದ್ಧಿ ನಿಗಮ ಮಾಡುವ ಮೂಲಕ ಹಿಂದುಳಿದ ಸಮಾಜದ ಬೆನ್ನಿಗೆ ನಿಂತ ಏಕೈಕ ಸಿಎಂ ಬಸವರಾಜ ಬೊಮ್ಮಾಯಿ ಎಂದು ತಂಗಡಗಿಯ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಅನ್ನಧಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು ನುಡಿದರು.

ಶಿಗ್ಗಾವಿ ಪಟ್ಟಣಕ್ಕೆ ಬೇಟಿ ನೀಡಿ ಹಡಪದ ಸಮಾಜದ ಬಾಂಧವರಿಂದ ಸನ್ಮಾನಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿ ಹಿಂದುಳಿದ ಸಮಾಜ ಈ ಸಮಾಜಕ್ಕೆ ಇಲ್ಲಿವರೆಗೂ ನ್ಯಾಯ ಸಿಕ್ಕಿಲ್ಲ ಈ ಸಮಾಜವನ್ನು ಪ್ರವರ್ಗ ಒಂದಕ್ಕೆ ತರಬೇಕಾಗಿರುವ ಆದ್ಯ ಕರ್ತವ್ಯ ನಮ್ಮದೆಲ್ಲರದು ಹಿಂದೆ ಎಷ್ಟೋ ಸರ್ಕಾರಗಳು ಬಂದು  ಹೋದರು ನೋಡಲಿಲ್ಲ ಈ ಸಮಾಜವನ್ನು ಈ ಸಮಾಜ ತೀರ ಹಿಂದುಳಿದಿರುವಂತಹ ಸಮಾಜ ಈ ಸಮಾಜದ ಅನೇಕ ಬೇಡಿಕೆಗಳು ಇದ್ದ ಕಾರಣ ಈ ಸಮಾಜಕ್ಕೆ ಮೂರು ಕೋಟಿ ಹಣವನ್ನು ಬಿಡುಗಡೆ ಮಾಡಿ ಹಡಪದ ನಿಗಮ ಮಂಡಳಿ ಸ್ಥಾಪನೆ ಮಾಡಿ ನುಡಿದಂತೆ ನಡೆದ ಬಸವರಾಜ ಬೊಮ್ಮಾಯಿಯವರು ಭರವಸೆ ಕೊಟ್ಟಂತೆ ನಡೆದುಕೊಂಡರು ಎಂದರು.

ಸಮಗ್ರ ಹಡಪದ ಸಮಾಜವನ್ನು ಕಾನೂನಿನ ಅಡಿಯಲ್ಲಿ ತಂದು ಈ ಸಮಾಜಕ್ಕೆ ನ್ಯಾಯ ಕೊಡಿಸುವುದು ಎಲ್ಲರ ಆದ್ಯ ಕರ್ತವ್ಯ ಮುಂದಿನ ದಿನಮಾನದಲ್ಲಿ ಆ ಕೆಲಸವನ್ನು ಮಾಡೋಣ ಶ್ರೀಮಠದ ಕಾರ್ಯಕ್ರಮದಲ್ಲಿ ಬಂದು ಬಾಗಿಯಾಗಿ ಈ ಸಾಮಾಜಕ್ಯ ಶಕ್ತಿಯಾಗಿ ಶ್ರೀಗಳಿಗೆ ಬೆನ್ನೆಲುಬಾಗಿ ಎಂದರು.

ತಾಲೂಕಿನಾದ್ಯಂತ 19 ಹಳ್ಳಿಗಳ ಸಂಚಾರ ಮಾಡಿ ಬಸವಾದಿ ಶಿವಶರಣರ ಆಶೀವರ್ಾದ ಸದಾ ಹೀಗೆ ನಿಮ್ಮ ಮೇಲೆ ಇರಲಿ ಎಂದು ಸಿಎಂ ಬೊಮ್ಮಾಯಿವರಿಗೆ ಹಾರೈಸುತ್ತೇವೆ ಎಂದರು. 

ತಾಲೂಕಾ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ ಮಾತನಾಡಿ ಸಮಾಜದ ಸಂಪೂರ್ಣ ಅಭಿವೃದ್ಧಿಗೆ ಹಾಗೂ ಸಂಘಟನೆ ಸದಾ ಕ್ರಿಯಾಶೀಲತೆಯಿಂದ ತಾಲೂಕಿನ ಎಲ್ಲ ಹಿರಿಯರ ಹಾಗೂ ಪದಾಧಿಕಾರಿಗಳ ಸಹಯೋಗದಲ್ಲಿ ಸಮಾಜವನ್ನು ಬಳಪಡಿಸೋಣ ಎಂದರು.

ಸಮಾಜದ ಗೌರವಾಧ್ಯಕ್ಷ ಬಸವರಾಜ್ ಹಡಪದ, ಉಪಾಧ್ಯಕ್ಷರು ಶಿವರಾಜ್ ಕ್ಷವರದ ಪ್ರಧಾನ ಕಾರ್ಯದರ್ಶಿ ಜಗದೀಸ್ ಹಡಪದ, ಖಜಾಂಚಿ ರುದ್ರಪ್ಪ ಹಡಪದ, ಅಪ್ಪಣ್ಣ ಕೋ ಆಫ್ ಸೊಸೈಟಿ ಬ್ಯಾಂಕಿನ ಅಧ್ಯಕ್ಷ ಮುತ್ತುರಾಜ ಕ್ಷವರದ, ವೃತ್ತಿ ಬಾಂಧವರ್ ಅಧ್ಯಕ್ಷರು ವಿರೇಶ್ ಹಡಪದ, ಹಿರಿಯರಾದ ಶಿವಕುಮಾರ್ ಮಾಡ್ಲಿಕರ್, ಬಸಪ್ಪ ಹಡಪದ, ಕೋಟೆಪ್ಪ ಹಡಪದ, ಗುರುಬಸಪ್ಪ ಹಡಪದ, ಹನುಮಂತ ಹಡಪದ, ಮಂಜುನಾಥ್ ಹಡಪದ, ಮಾಲತೇಶ್ ಹಡಪದ, ಚನಸಪ್ಪ ಹಡಪದ, ಉಮೇಶ್ ಕಟ್ಟಿಮನಿ, ಬಸಪ್ಪ ಕಟ್ಟಿಮನಿ ಹಾಗೂ ಸಮಾಜದ ಮುಖಂಡರು ಭಾಗಿಯಾಗಿದ್ದರು 

ಸುದ್ದಿ ಓದಿ